ಉಗ್ರರ ಮೇಲಿನ ಭಾರತದ ದಾಳಿ ಖುಷಿ ಪಡುವ ವಿಚಾರ ಎಂದು ಡಾಲಿ ಧನಂಜಯ್ ಅವರು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತದ ‘ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡಿದ ಧನಂಜಯ್, ಇದು ಎಲ್ಲರೂ ಖುಷಿಪಡುವಂತಹ ವಿಚಾರ ಎಂದು ಭಾರತ ಸೇನೆಯ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ ಡಾಲಿ. ಉಗ್ರರಿಗೆ ಉತ್ತರ ಕೊಡಲೇಬೇಕು. ಪ್ರತಿ ಬಾರಿಯೂ ಉತ್ತರ ಕೊಟ್ಟಿದ್ದೇವೆ. ಇದೀಗ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಿಂದ ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ. ಇದು ಎಲ್ಲರೂ ಖುಷಿಪಡುವಂತದ್ದು ಎಂದಿದ್ದಾರೆ.
ಇದೇ ವೇಳೆ ಸೋನು ನಿಗಮ್ ಅವರ ಕನ್ನಡ ವಿವಾದದ ಬಗ್ಗೆಯೂ ಡಾಲಿ ಮಾತನಾಡಿ, ನಾಡು ನುಡಿ ಅಂತ ಬಂದಾಗ ಎಲ್ಲರೂ ನಿಂತುಕೊಳ್ಳಲೇಬೇಕು. ಸೋನು ನಿಗಮ್ ಕೂಡ ಕನ್ನಡದ ಬಗ್ಗೆ ಕಾಳಜಿಯಿರುವ ಕಲಾವಿದ. ಅವರು ಒಳ್ಳೆಯ ಸಿಂಗರ್, ಚಿತ್ರರಂಗಕ್ಕೆ ಅವರು ಕೊಡುಗೆ ಕೊಟ್ಟಿದ್ದಾರೆ. ನಾವು ಅವರು ಹಾಡಿರುವ ಹಾಡುಗಳನ್ನು ಕೇಳಿ ಎಂಜಾಯ್ ಮಾಡಿದ್ದೇವೆ. ಅಂದಿನ ಸಂದರ್ಭದಲ್ಲಿ ಅವರ ಪ್ರತಿಕ್ರಿಯೆ ಬೇರೆ ತರಹ ಕಾಣಿಸಿರಬಹುದು. ಅಥವಾ ತಪ್ಪಾಗಿ ರಿಯಾಕ್ಟ್ ಮಾಡಿರಬಹುದು. ಆದರೆ ಕನ್ನಡ ಅಂತ ಬಂದಾಗ ನಾವೆಂದಿಗೂ ಕನ್ನಡದ ಪರನೇ ಇರುತ್ತೇವೆ. ಕನ್ನಡನೇ ನಮ್ಮ ಅನ್ನ, ಅದೇ ನಮ್ಮ ಜೀವ ಎಂದಿದ್ದಾರೆ.