ಮಂಡ್ಯ :-ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ನಡೆಸಿದೆ. ಇದರ ಬೆನ್ನಲ್ಲೆ, ಕರ್ನಾಟಕ ಸರ್ಕಾರವು ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಸಂಕಲ್ಪ ಮಾಡಲು ಆದೇಶಿಸಿದೆ.
ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ: ತನಿಖಾ ವರದಿ ಸಲ್ಲಿಕೆಗೆ ಕಾಲಾವಕಾಶ ಕೋರಿದ ಲೋಕಾಯುಕ್ತ!
ಆದೇಶದ ಬೆನ್ನಲ್ಲೇ ಗಂಜಾಮ್ ನ ನಿಮಿಷಾಂಭ ದೇಗುಲದಲ್ಲಿ ಸೈನಿಕರಿಗಾಗಿ ಸಿಂಧೂರ ಹೆಸರಲ್ಲಿ ಪೂಜೆ ಸಲಿಕೆ ಮಾಡಲಾಗಿದೆ. ರಾಜ್ಯದ ಪ್ರಸಿದ್ದ ದೇಗುಲದಲ್ಲಿ ಒಂದಾದ ಮಂಡ್ಯ ಜಿಲ್ಲೆಯ ನಿಮಿಷಾಂಭ ದೇಗುಲದಲ್ಲಿ ಇಂದು ಮುಂಜಾನೆ ಸೈನಿಕರಿಗಾಗಿ ದೇವಿಗೆ ಮೊದಲ ಪೂಜೆ ಸಲ್ಲಿಕೆ ಮಾಡಲಾಗಿದೆ. ದೇಶ ಕಾಯುವ ಯೋಧರಿಗೆ ಯಾವುದೇ ತೊಂದರೆ ಆಗದಂತೆ ದೇವಿಯಲ್ಲಿ ಪ್ರಾರ್ಥಿಸಿ ಸಂಕಲ್ಪ ಮಾಡಿದ್ದಾರೆ.
ಭಾರತಮಾತೆಯನ್ನು ಕಾಯುವ ಯೋಧರಿಗಾಗಿ ಇಂದು ದೇವಿಗೆ ಮೊದಲ ಪೂಜೆ ಸಲ್ಲಿಕೆ ಮಾಡಲಾಗಿದೆ.