ನೆಲಮಂಗಲ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆದ ಸೇನಾ ಕಾರ್ಯಾವಚರಣೆ ಆಪರೇಷನ್ ಸಿಂಧೂರ್ (Operation Sindoor) ಬೆಂಬಲಿಸಿ ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಬೃಹತ್ ತಿರಂಗಾಯಾತ್ರೆ ಹಮ್ಮಿಕೊಂಡಿದೆ.
ನಾಳೆ ಬೆಳಗ್ಗೆ 9:30ಕ್ಕೆ ಕೆ.ಆರ್ ಸರ್ಕಲ್ ನಿಂದ ಆರಂಭಗೊಳ್ಳುವ ತಿರಂಗಾಯಾತ್ರೆ, ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ(ಕೆಎಸ್ ಸಿಎ ಸರ್ಕಲ್) ವರೆಗೂ ನಡೆಯಲಿದೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ತ್ರಿವರ್ಣ ಧ್ವಜ ಹಿಡಿದು ನಡೆಯುವ ಜಾಥಾ ಮೂಲಕ ದೇಶದ ಎಲ್ಲ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಮಾರ್ಚ್ ಮಾಡಲಾಗುತ್ತದೆ. ಇದರಲ್ಲಿ ಪಕ್ಷ ಸಂತ ಏನಿಲ್ಲ. ಎಲ್ಲ ಪಕ್ಷದ ಕಾರ್ಯಕರ್ತರು, ಸರ್ಕಾರಿ, ಖಾಸಗಿ ಸಂಘಟನೆಗಳು ಭಾಗವಹಿಸಬಹುದು. ಯಾವುದೇ ಅಧಿಕಾರಿಗಳು, ಸಿನಿಮಾ, ವಿದ್ಯಾರ್ಥಿಗಳು, ಮುಖ್ಯಂತ್ರಿಗಳು ಹಾಗೂ ಕ್ಯಾಬಿನೆಟ್ ಗೂ ಆಹ್ವಾನವಿದೆ. ವಿಧಾನಸೌಧ ಎದುರು ದೇಶದ ಸೈನಿಕರಿಗೆ ಗೌರವ ಸಲ್ಲಿಸಲಾಗತ್ತೆ. ಕೇಂದ್ರ ಸರ್ಕಾರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಪರವಾಗಿ ನಿಲ್ಲುವುದು ಜಾಥಾದ ಉದ್ದೇಶವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ, ಪ್ರಮುಖ ಜಲಾಶಯಗಳಿಗೆ ಹೈ ಅಲರ್ಟ್: ಸಿಎಂ ಸಿದ್ದರಾಮಯ್ಯ
ರಾಜ್ಯದ ಅಣೆಕಟ್ಟುಗಳಿಗೆ ಭದ್ರತೆ
ಯುದ್ಧ ಭೀತಿ ಇರುವುದರಿಂದ ರಾಜ್ಯದ ಡ್ಯಾಂಗಳಿಗೆ ಭದ್ರತೆ ಕಲ್ಪಿಸುವುದು ನಮ್ಮ ಡ್ಯೂಟಿ. ಎಲ್ಲಾ ಜಲಾಶಯಗಳಲ್ಲೂ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಜನರು ಜಾಗೃತವಾಗಿರಬೇಕು ಅಂತ ಮುಂಜಾಗೃತ ಕ್ರಮ ಕೈಗೊಳ್ಳಲಾಗುತ್ತಿದೆ. ಕಿಡಿಗೇಡಿಗಳು ಯಾರೇ ಇದ್ದರೂ ಕೂಡ ನಮ್ಮ ಸರ್ಕಾರ ಗಮನ ಹರಿಸಿದೆ ಎಂದು ಜಲಸಂಪನ್ಮೂಲ ಸಚಿವರು ಆದ ಡಿಕೆ ಶಿವಕುಮಾರ್ ಹೇಳಿದ್ದಾರೆ.