ಭಾರತದ ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್ 2025) ಕೂಡ ಭೀತಿಯ ಅಂಚಿಗೆ ತಲುಪಿದೆ. ವಿದೇಶಿ ಆಟಗಾರರು ಅರ್ಧದಲ್ಲೇ ಕೈಬಿಡುವ ಭೀತಿಯೂ ಇದಕ್ಕೆ ಕಾರಣವಾಗುತ್ತಿದೆ. ಏತನ್ಮಧ್ಯೆ, ಭಾರತೀಯ ಸೇನೆಯು ಆಪರೇಷನ್ ಸಿಂಧ್ ಅನ್ನು ಪ್ರಾರಂಭಿಸಿದ ಕೂಡಲೇ ವಿದೇಶಿ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ನಿಂದ ಹಿಂದೆ ಸರಿಯಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದವು.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಪಿಎಸ್ಎಲ್ ಪಂದ್ಯಾವಳಿಯಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಚಿಂತಿತರಾಗಿದ್ದಾರೆ. ಆದ್ದರಿಂದ, ವಿದೇಶಿ ಆಟಗಾರರು ಪಂದ್ಯಾವಳಿಯನ್ನು ಅರ್ಧದಲ್ಲೇ ತೊರೆದು ತವರಿಗೆ ಮರಳುವ ಸಾಧ್ಯತೆ ಹೆಚ್ಚು.
ಈ ವರ್ಷ ಐಪಿಎಲ್ನಲ್ಲಿ ಅವಕಾಶ ಸಿಗದ ಅನೇಕ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಕಾಣಿಸಿಕೊಂಡರು. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಬೆದರಿಕೆಯ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರು ಲೀಗ್ನಿಂದ ಹಿಂದೆ ಸರಿಯಲು ಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ. ಆದ್ದರಿಂದ, ಪಾಕಿಸ್ತಾನ ಸೂಪರ್ ಲೀಗ್ ಸೀಸನ್ 10 ಅನ್ನು ಅರ್ಧಕ್ಕೆ ನಿಲ್ಲಿಸಿದರೂ ಆಶ್ಚರ್ಯವೇನಿಲ್ಲ.
ಪಾಕಿಸ್ತಾನ ಸೂಪರ್ ಲೀಗ್ನಲ್ಲಿರುವ ವಿದೇಶಿ ಆಟಗಾರರ ಪಟ್ಟಿ ಇಂತಿದೆ:
ಇಸ್ಲಾಮಾಬಾದ್ ಯುನೈಟೆಡ್ ತಂಡ: ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ), ರಿಲೇ ಮೆರೆಡಿತ್ (ಆಸ್ಟ್ರೇಲಿಯಾ), ಬೆನ್ ದ್ವಾರ್ಹುಯಿಸ್; ಕಾಲಿನ್ ಮುನ್ರೊ (ನ್ಯೂಜಿಲೆಂಡ್), ರೋಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ), ಆಂಡ್ರಿಯಾಸ್ ಗೌಸ್ (ಯುಎಸ್ಎ), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್).
ಕರಾಚಿ ಕಿಂಗ್ಸ್ ತಂಡ: ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಲಿಟನ್ ದಾಸ್ (ಬಾಂಗ್ಲಾದೇಶ), ಜೇಮ್ಸ್ ವಿನ್ಸ್ (ಇಂಗ್ಲೆಂಡ್), ಟಿಮ್ ಸೀಫರ್ಟ್ (ನ್ಯೂಜಿಲೆಂಡ್), ಆಡಮ್ ಮಿಲ್ನೆ (ನ್ಯೂಜಿಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್).
ಲಾಹೋರ್ ಖಲಂದರ್ಸ್ ತಂಡ: ರಿಷದ್ ಹೊಸೇನ್ (ಬಾಂಗ್ಲಾದೇಶ), ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಟಾಮ್ ಕರನ್ (ಇಂಗ್ಲೆಂಡ್), ಡೇವಿಡ್ ವೀಜಾ (ನಮೀಬಿಯಾ), ಕುಶಾಲ್ ಪೆರೆರಾ (ಶ್ರೀಲಂಕಾ), ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್), ಸಿಕಂದರ್ ರಜಾ (ಜಿಂಬಾಬ್ವೆ).
ಮುಲ್ತಾನ್ ಸುಲ್ತಾನ್ಸ್ ತಂಡ: ಡೇವಿಡ್ ವಿಲ್ಲಿ (ಇಂಗ್ಲೆಂಡ್), ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್), ಮೈಕೆಲ್ ಬ್ರೇಸ್ವೆಲ್ (ನ್ಯೂಜಿಲೆಂಡ್), ಗುಡಕೇಶ್ ಮೋಟೆ (ವೆಸ್ಟ್ ಇಂಡೀಸ್), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಶೈ ಹೋಪ್ (ವೆಸ್ಟ್ ಇಂಡೀಸ್), ಜೋಶ್ ಲಿಟಲ್ (ಐರ್ಲೆಂಡ್).
ಪೇಶಾವರ್ ಝಲ್ಮಿ ತಂಡ: ನಜಿಬುಲ್ಲಾ ಜದ್ರಾನ್ (ಅಫ್ಘಾನಿಸ್ತಾನ), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ), ನಹಿದ್ ರಾಣಾ (ಬಾಂಗ್ಲಾದೇಶ), ಟಾಮ್ ಕೊಹ್ಲರ್-ಕಾಡ್ಮೋರ್ (ಇಂಗ್ಲೆಂಡ್), ಲಿಜ್ ವಿಲಿಯಮ್ಸ್ (ದಕ್ಷಿಣ ಆಫ್ರಿಕಾ), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್).
ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ: ಫಿನ್ ಅಲೆನ್ (ನ್ಯೂಜಿಲೆಂಡ್), ಮಾರ್ಕ್ ಚಾಪ್ಮನ್ (ನ್ಯೂಜಿಲೆಂಡ್), ಕೈಲ್ ಜೇಮಿಸನ್ (ನ್ಯೂಜಿಲೆಂಡ್), ರಿಲೇ ರೊಸ್ಸೌ (ದಕ್ಷಿಣ ಆಫ್ರಿಕಾ), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್).