ಬೆಂಗಳೂರು: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಇನ್ನೂ ಈ ವಿಚಾರವಾಗಿ ಕಿಚ್ಚ ಸುದೀಪ್ ಭಾರತೀಯ ಸೇನೆ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಎಕ್ಸ್ನಲ್ಲಿ ಸುದೀಪ್, ಒಬ್ಬ ಭಾರತೀಯನಾಗಿ ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್ನಲ್ಲಿ ನಡೆದ ಘಟನೆಯಿಂದ ನೋವು ಅನುಭವಿಸಿದೆ. ಇಂದು ನ್ಯಾಯ ಸಿಕ್ಕಿದೆ ಎಂದು ಸುದೀಪ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಅದರಂತೆಯೇ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ.
As an Indian… as a son of this sacred soil,
I felt the tremor of pain in Pahalgam.
Today, I feel the thunder of justice.
Operation Sindoor: not just a mission, but a sacred vow.
The sindoor of Bharat was stained… our bravehearts restored its honor with fire and precision.
To… pic.twitter.com/QzYruEjHFc— Kichcha Sudeepa (@KicchaSudeep) May 7, 2025
ಇದು ಪವಿತ್ರ ಪ್ರತಿಜ್ಞೆ. ಉಗ್ರರು ದಾಳಿ ಮಾಡುವ ಮೂಲಕ ಭಾರತದ ಸಿಂಧೂರಕ್ಕೆ ಅಪಮಾನ ಮಾಡಲಾಗಿತ್ತು. ಆದರೆ ನಮ್ಮ ಧೈರ್ಯಶಾಲಿ ಸೈನಿಕರು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ವಂದನೆಗಳು ಎಂದಿದ್ದಾರೆ.
ನಮ್ಮ ಗೌರವಾನ್ವಿತ ಪ್ರಧಾನಿಗಳು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಕಾರ್ಯಕ್ಕಾಗಿ ವಂದನೆಗಳು. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ. ಜೈ ಹಿಂದ್ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.