ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ದೇಶಾದ್ಯಂದ ಮೆಚ್ಚುಗೆಗೆ ಪಾತ್ರವಾಗಿದೆ. ಪಹಲ್ಗಾಮ್ ದಾಳಿ ನಡೆಸಿ ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಪಾಪಿ ಭಯೋತ್ಪಾಕದ ವಿರುದ್ಧ ಭಾರತ ನಡೆಸಿ ಈ ಕಾರ್ಯಾಚರಣೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ದೊಡ್ಡ ಪ್ರಯತ್ನಗಳು ನಡೆಯುತ್ತಿದೆ. ನಿರ್ಮಾಪಕರು ನಾ ಮುಂದು ತಾ ಮುಂದೆ ಅಂತಾ ಟೈಟಲ್ ರಿಜಿಸ್ಟ್ರೇಷನ್ಗೆ ಅರ್ಜಿ ಹಾಕಿದ್ದರು. ಇದೀಗ ಆ ಶೀರ್ಷಿಕೆ ಬಾಲಿವುಡ್ ಪಾಲಾಗಿದೆ.
ಆಪರೇಷನ್ ಸಿಂಧೂರ ಸಿನಿಮಾಗೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆಗಳು ದೃಶ್ಯ ರೂಪ ಕೊಡಲು ಹೊರಟಿದ್ದಾರೆ. ಇಂದು ಪೋಸ್ಟರ್ ಜೊತೆಗೆ ಟೈಟಲ್ ಅನೌನ್ಸ್ ಮಾಡಲಾಗಿದೆ. ಮಹಿಳಾ ಸೈನಿಕರೊಬ್ಬರು ಸೇನಾ ಸಮಸ್ತ್ರದಲ್ಲಿ ನಿಂತು ಹಣೆಗೆ ಕುಂಕುಮ ಇಡುವ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಆಪರೇಷನ್ ಸಿಂಧೂರ ಸಿನಿಮಾವನ್ನು ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ & ದಿ ಕಂಟೆಂಟ್ ಎಂಜಿನಿಯರ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲು ಮುಂದಾಗಿವೆ. ಉತ್ತಮ್ ಮಹೇಶ್ವರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ನಿರ್ಮಾಣ ಸಂಸ್ಥೆಗಳು ಈ ಹಿಂದೆ ನಿಖಿತಾ ರಾಯ್ ಎಂಬ ಸಿನಿಮಾ ಮಾಡಿದ್ದರು.
ಈ ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಭಾರತ ಆಪರೇಷನ್ ಸಿಂಧೂರ ಮೂಲಕ ಪಾಕ್ ಭಯೋತ್ಪಾದ ತಾಣಗಳನ್ನು ದ್ವಂಸಗೊಳಿಸಿದೆ. ಇದು ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಏರ್ ಸ್ಟೈಕ್ ಆಗಿದೆ.