ಇಸ್ಲಾಮಾಬಾದ್:- ಭಾರತದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೇಕ್ ಆಗಿದ್ದು, ಶೆಹಬಾಜ್ ಶರೀಫ್ ಮನೆ ಬಳಿಯೇ ದಾಳಿ ನಡೆದಿದೆ. ಪಾಕ್ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಶೆಹಬಾಜ್ ಶರೀಫ್ ಅವರ ಮನೆಯಿದೆ. ಮನೆಗೆ 20 ಕಿಮೀ ದೂರದಲ್ಲೇ ಸ್ಫೋಟದ ಸದ್ದಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭವಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ʼಆಪರೇಷನ್ ಸಿಂದೂರ್ʼ ಕಾರ್ಯಾಚರಣೆ ಕೈಗೊಂಡಿದೆ. ಈಗಾಗಲೇ ಪಾಕಿಸ್ತಾನದ ಉಗ್ರರ ನೆಲೆಗಳನ್ನ ಉಡಿಸ್ ಮಾಡಿರುವ ಭಾರತ ಇಂದು ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. ಭಾರತೀಯ ಸೇನಾಪಡೆ ಪಾಕಿಸ್ತಾನ ಹಲವು ನಗರಗಳಿಗೆ ನುಗ್ಗಿ ಹೊಡೆಯುತ್ತಿದೆ.
ಪಾಕ್ ರಾಜಧಾನಿ ಇಸ್ಲಾಮಾದಾದ್, ಲಾಹೋರ್, ರಾವಲ್ಪಿಂಡಿ, ಸಿಯಾಲ್ಕೋಟ್, ಪೇಶಾವರ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸಿದೆ. ಭಾರತೀಯ ನೌಕಾಪಡೆಯೂ ಕೂಡ INS ವಿಕ್ರಾಂತ್ ಮೂಲಕ ಆರ್ಭಟಿಸಿದ್ದು, ಕರಾಚಿ ಬಂದರಿನ ಮೇಲೆ ದಾಳಿ ಮಾಡುವ ಮೂಲಕ ಧ್ವಂಸ ಮಾಡಿದೆ
ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ರಸ್ತೆಗಳಿಗೆ ಬಾರದಂತೆ ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತಗಳಿಂದ ಸೂಚನೆ ನೀಡಿದೆ. ಪಾಕಿಸ್ತಾನದ ಪೈಲಟ್ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿರೋದು ಎನ್ನಲಾಗಿದೆ.