ಬೆಂಗಳೂರು: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಅತ್ಯಂತ ಹಮ್ಮೆಯ ವಿಷಯ. ವಾಯುಸೇನೆ, ಭೂಸೇನೆ ಜಂಟಿಯಾಗಿ ಮಾಡಿರುವ ಕೆಲಸಕ್ಕೆ ಇಲ್ಲಿಂದಲೇಸೆಲ್ಯೂಟ್ ಹೇಳ್ತೀನಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂತಸ ಹಂಚಿಕೊಂಡಿದ್ದಾರೆ.
ಉಗ್ರರ ವಿರುದ್ಧ ಕಾರ್ಯಾಚರಣೆಗಳು ಇನ್ನೂ ಮುಂದುವರೆಯಲಿ. ಭಯೋತ್ಪಾದರು ಮತ್ತೆ ಭಾರತದ ಕಡೆ ಸುಳಿಯದಂತೆ ಮಾಡಬೇಕಿದೆ. ಭಯೋತ್ಪಾದಕರ ಮನೆಗೆ ನುಗ್ಗಿ ಹೊಡೆಯಬೇಕು ಎಂದು ಲಾಡ್ ಹೇಳಿದ್ದಾರೆ.
ಈ ರಾಶಿಯವರಿಗೆ ಶತ್ರುಗಳ ಸಂಖ್ಯೆ ಅಧಿಕ: ಬುಧವಾರದ ರಾಶಿ ಭವಿಷ್ಯ 07 ಮೇ 2025!
ಪಾಕ್ ಮೇಲೆ ನಡೆದ ಸೇನಾ ಕಾರ್ಯಾಚರಣೆಗೆ ಗಾಂಧಿ ತತ್ವ ಪಾಲಿಸಿ ಅಂತ ಕಾಂಗ್ರೆಸ್ ಟ್ವೀಟ್ ಮಾಡಿ ಯಡವಟ್ಟು ಮಾಡ್ಕೊಂಡಿದೆ. ಈ ವಿಚಾರ ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ನಿರ್ಧಾರಕ್ಕೆ ನಾವು ಬದ್ದ. ವೈಯಕ್ತಿಕ ವಿಚಾರಗಳು, ಅಭಿಪ್ರಾಯಗಳಿಗೆ ನಮ್ಮ ಬೆಂಬಲ ಇಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.