ಬೆಳಗಾವಿ: ಪ್ರವಾಸಕ್ಕೆಂದು ಕಾಶ್ಮೀರದ ಪಹಲ್ಗಾಂಗೆ ತೆರಳಿದ್ದ 26 ಅಮಾಯಕ ಹಿಂದೂಗಳ ಹತ್ಯಾಕಾಂಡಕ್ಕೆ ಇದೀಗ ಭಾರತ ಪ್ರತಿಕಾರ ತೀರಿಸಿಕೊಳ್ತಿದೆ. ಆಪರೇಶಷ ಸಿಂಧೂರ ಹೆಸರಲ್ಲಿ ನಡೆದ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 9 ಉಗ್ರರ ಅಡಗುತಾಣಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿದೆ. ಭಾರತದ ಈ ಪ್ರತಿಕಾರದ ಸಂದೇಶವನ್ನು ಜಗತ್ತಿಗೆ ಸಾರಿದ್ದ ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಕರುನಾಡಿನ ಸೊಸೆ ಅನ್ನೋದು ಇದೀಗ ಕನ್ನಡಿಗರ ಗೌರವ ಹೆಚ್ಚುವಂತೆ ಮಾಡಿದೆ.
ಉಗ್ರರನ್ನು ಪೋಷಿಸುತ್ತಿರುವ ಪಾಪಿ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಭಾರತ ತಿರುಗೇಟು ನೀಡಿದೆ. ಭಾರತೀಯ ನೆಲದಲ್ಲೇ ನಿಂತು ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ಭಾರತೀಯ ಸೇನೆ ದ್ವಂಸಗೊಳಿಸಿತ್ತು. ಭಾರತದ ಪ್ರತಿಕಾರದ ಸಂದೇಶವನ್ನು ಇಡೀ ಜಗತ್ತಿಗೆ ಸುದ್ದಿಗೋಷ್ಠಿ ಮೂಲಕ ಜಗತ್ತಿಗೆ ತಿಳಿಸಿಕೊಟ್ಟಿದ್ದು ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ.
ಅಮೃತಸರದ ಗೋಲ್ಡನ್ ಟೆಂಪಲ್ ಮೇಲೆ ಪಾಪಿ ಪಾಕ್ ಕಣ್ಣು..ಪಾಕಿಸ್ತಾನ ಸೇನೆ ಕೃತ್ಯ ವಿಫಲಗೊಳಿಸಿದ ಭಾರತೀಯ ಸೇನೆ!
ಸೋಫಿಯಾ ಮೂಲತಃ ಗುಜರಾತಿನ ವಡೋದರದವರಾದರೂ ಕನ್ನಡದ ಸೊಸೆ ಎಂಬುದು ಹೆಮ್ಮೆಯ ವಿಷಯ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರನ್ನು ಸೋಫಿಯಾ ಖುರೇಶಿ 2015ರಲ್ಲಿ ವಿವಾಹವಾಗಿದ್ದಾರೆ. ಈಗ ಕರ್ನಲ್ ತಾಜುದ್ದೀನ್ ಝಾನ್ಸಿಯಲ್ಲಿದ್ದರೆ, ಕರ್ನಲ್ ಸೋಫಿಯಾ ದೆಹಲಿಯ ಸೇನಾ ಮುಖ್ಯ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೊಸೆ ಸೋಫಿಯಾ ಶೌರ್ಯಕ್ಕೆ ಕೊಣ್ಣೂರಲ್ಲಿರುವ ಮಾವ ಗೌಸ್ ಬಾಗೇವಾಡಿ, ಭಾವ ಸಿಕಂದರ್ ಬಾಗೇವಾಡಿ ಸಂತಸಪಟ್ಟಿದ್ದಾರೆ. ಸೊಸೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಕ್ಕೆ ನಮಗೆ ಕೋಟಿ ಸಂಪತ್ತು ಗಳಿಸಿದ ಖುಷಿ ಆಗಿದೆ. ಅಲ್ಲದೇ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ಸರ್ವನಾಶವಾಗಬೇಕು. ಭಾರತೀಯ ಸೇನಾಬಲ ಸದೃಢವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕರ್ನಲ್ ಸೋಫಿಯಾ ಹಾಗೂ ಕರ್ನಲ್ ತಾಜುದ್ದೀನ್ ಭಾರತೀಯ ಸೇನೆಗೆ ಸರ್ವಸ್ವವನ್ನು ಮೀಸಲಿಟ್ಟಿರುವ ದಂಪತಿ, ಇಡೀ ಯುವ ಸಮುದಾಯಕ್ಕೆ ಪ್ರೇರಣೆ ಆಗಿದೆ. ಸಿಂಧೂರ-2 ಆಪರೇಷನ್ಗೆ ಭಾರತ ಸೇನೆ ಸಜ್ಜುಗೊಳ್ಳುತ್ತಿದ್ದು, ಇಲ್ಲೂ ಕೂಡ ಬೆಳಗಾವಿ ಸೊಸೆಗೆ ಯಶಸ್ಸು ಸಿಗಲಿ ಎಂಬುದು ಪ್ರತಿ ಕನ್ನಡಿಗರ ಹಾರೈಕೆ.
ವರದಿ: ಬಾಳಪ್ಪ ತೇರದಾಳ AIN ನ್ಯೂಸ್ ಬೆಳಗಾವಿ