ಬಿಹಾರ: ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸುವಾಗ ಧರ್ಮ ಯಾವುದು ಅಂತಾ ಕೇಳಿದ್ದರು. ಯಾರೆಲ್ಲ ತಾನು ಹಿಂದೂ ಎಂದಿದ್ದರೋ ಅವರನ್ನೆಲ್ಲ ಗುಂಡಿಟ್ಟು ಸಾಯಿಸಿದ್ದರು.
ಹೆಂಡತಿ, ಮಕ್ಕಳ ಎದುರಲ್ಲೇ ಬರ್ಬರವಾಗಿ ಮುಗಿಸಿದ್ದರು. ಪಾಕ್ ಬೆಂಬಲಿತ ಉಗ್ರರ ಪೈಶಾಚಿಕ ಕೃತ್ಯಕ್ಕೆ ಒಟ್ಟು 26 ಹೆಣ್ಮಕ್ಕಳು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ನಡೆಸಿದೆ.
ಆದ್ದರಿಂದ ಆಪರೇಷನ್ ಸಿಂಧೂರದಿಂದ ಪ್ರೇರಿತರಾದ ಬಿಹಾರದ ದಂಪತಿ ತಮ್ಮ ನವಜಾತ ಹೆಣ್ಣು ಮಗುವಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ. ಭಾರತೀಯ ಸೇನೆ ಪಾಕಿಸ್ತಾನದಲ್ಲಿ ‘ಆಪರೇಷನ್ ಸಿಂಧೂರ’ ಪ್ರಾರಂಭಿಸಿದ ದಿನವೇ ಬಿಹಾರದ ಕತಿಹಾರ್‌ನಲ್ಲಿರುವ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗು ಜನಿಸಿದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ದಿನವೇ ಜನಿಸಿದ ಹಿನ್ನೆಲೆ ‘ಸಿಂಧೂರ’ ಎಂದು ಹೆಸರಿಟ್ಟು ಗೌರವ ಸಮರ್ಪಣೆ ಮಾಡಿದ್ದಾರೆ. ತನ್ನ ಮಗುವಿಗೆ ‘ಸಿಂಧೂರ’ ಎಂದು ಹೆಸರಿಡೋದಕ್ಕೆ ಭಾರತೀಯ ಸೇನೆಯ ಆಪರೇಷನ್ ಸಿಂಧೂರವೇ ನನಗೆ ಪ್ರೇರಣೆ ಎಂದು ತಂದೆ ಭಾವುಕರಾಗಿದ್ದಾರೆ.