Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಜನಾಕ್ರೋಶದ ಬಳಿಕ ಪ್ರಯಾಣ ದರ ಕಡಿತಗೊಳಿಸಿದ ನಮ್ಮ ಮೆಟ್ರೋ

    By Author AINFebruary 14, 2025
    Share
    Facebook Twitter LinkedIn Pinterest Email
    Demo

    ನಮ್ಮ ಮೆಟ್ರೋ ದರ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜನರ ಆಕ್ರೋಶದ ಬಳಿಕ ಎಚ್ಚೆತ್ತುಕೊಂಡ ಬಿಎಂಆರ್‌ ಸಿಎಲ್‌ ಇದೀಗ ದರ ಕಡಿತಗೊಳಿಸಿದ್ದು ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಪ್ರಯಾಣಿಕರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಬಿಎಂಆರ್​ಸಿಎಲ್, ಶೇ 90 ರಿಂದ 100 ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ದರ ತುಸು ಇಳಿಕೆ ಮಾಡಿದೆ. ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಬಿಎಂಆರ್​ಸಿಎಲ್ ಗುರುವಾರ ತಿಳಿಸಿತ್ತು. ಆದರೆ, ಈವರಗೆ ಪರಿಷ್ಕೃತ ದರ ಪಟ್ಟಿ ಮೆಟ್ರೋದ ಅಧಿಕೃತ ವೆಬ್​ಸೈಟ್​​ನಲ್ಲಾಗಲೀ ಎಕ್ಸ್ ತಾಣದಲ್ಲಾಗಲೀ ಪ್ರಕಟವಾಗಿಲ್ಲ. ಆದರೆ ಇಂದಿನಿಂದ ಪ್ರಯಾಣ ದರದಲ್ಲಿ ತುಸು ಇಳಿಕೆ ಜಾರಿಯಾಗಿದೆ.

    ಮೆಟ್ರೋ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದ ಬೆನ್ನಲ್ಲೇ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಬಿಎಂಆರ್​ಸಿಎಲ್ ಎಂಡಿ ಮಹೇಶ್ವರ್ ರಾವ್, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆ ಮಾಡಲಾಗುವುದು ಎಂದಿದ್ದರು.

    ಮೆಜೆಸ್ಟಿಕ್​​ನಿಂದ ವೈಟ್​ಫಿಲ್ಡ್​ಗೆ 90 ರೂ. ಇದ್ದ ದರ ಈಗ 80 ರೂ. ಆಗಿದೆ. ಮೆಜೆಸ್ಟಿಕ್​​ನಿಂದ ಚಲ್ಲಘಟ್ಟಕ್ಕೆ 70 ರೂ. ಇದ್ದ ದರ ಈಗ 60 ರೂ. ಆಗಿದೆ. ಮೆಜೆಸ್ಟಿಕ್​​ನಿಂದ ವಿಧಾನಸೌಧಕ್ಕೆ 20 ರೂ. ಇದ್ದ ದರ ಈಗ 10 ರೂ. ಆಗಿದೆ. ಮೆಜೆಸ್ಟಿಕ್​​ನಿಂದ ಕಬ್ಬನ್​ಪಾರ್ಕ್​ಗೆ ಇದ್ದ 20 ರೂ. ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮೆಜೆಸ್ಟಿಕ್​​ನಿಂದ ಬೈಯಪ್ಪನಹಳ್ಳಿಗೆ 60 ಇದ್ದ ದರ ಈಗ 50 ರೂ. ಆಗಿದೆ. ಮೆಜೆಸ್ಟಿಕ್​​ನಿಂದ ರೇಷ್ಮೆ ಸಂಸ್ಥೆಗೆ ಇದ್ದ 70 ರೂ. ದರ ಈಗ 60 ರೂ. ಆಗಿದೆ. ಜಾಲಹಳ್ಳಿಯಿಂದ ರೇಷ್ಮೆ ಸಂಸ್ಥೆಗೆ 90 ರೂ. ದರದಲ್ಲಿ ಬದಲಾವಣೆ ಇಲ್ಲ. ನಮ್ಮ ಮೆಟ್ರೋ ಕನಿಷ್ಠ, ಗರಿಷ್ಠ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

    Demo
    Share. Facebook Twitter LinkedIn Email WhatsApp

    Related Posts

    ವಾಹನ ಸವಾರರಿಗೆ ಗುಡ್ ನ್ಯೂಸ್: ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿ!

    June 18, 2025

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್

    June 18, 2025

    Shubhanshu Shukla: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷ ಯಾನಕ್ಕೆ ಹೊಸ ಡೇಟ್ ಫಿಕ್ಸ್..!

    June 18, 2025

    100, 200 ರೂಪಾಯಿ ನೋಟುಗಳ ಕುರಿತು ಬಿಗ್ ಅಪ್ಡೇಟ್ ಕೊಟ್ಟ RBI..! ಏನದು ಅಂತೀರಾ..?

    June 18, 2025

    Post Office: ಸೂಪರ್ ಸ್ಕೀಮ್.. ಪ್ರತಿ ದಿನ 333 ರೂಪಾಯಿ ಸೇವ್ ಮಾಡಿ, 17 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತೆ!

    June 18, 2025

    Air India: ಮತ್ತೊಂದು ಏರ್ ಇಂಡಿಯಾ ವಿಮಾನಕ್ಕೆ ತಾಂತ್ರಿಕ ದೋಷ: ಲಂಡನ್’ಗೆ ಫ್ಲೈಟ್ ಕ್ಯಾನ್ಸಲ್

    June 17, 2025

    Crude Oil Price: ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆ ಏರಿಕೆ..! ಭಾರತೀಯ ಕಂಪನಿಗಳ ಮೇಲೆ ಒತ್ತಡ

    June 17, 2025

    Gold Price: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಬಂಗಾರ ಖರೀದಿಸಲು ಇದೇ ಬೆಸ್ಟ್ ಟೈಮ್

    June 17, 2025

    Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!

    June 17, 2025

    ಕಣ್ಣುಗಳ ಸುತ್ತಲೂ ಊದಿ ಕೊಳ್ಳುತ್ತಿದ್ಯಾ!? ಹಾಗಿದ್ರೆ ನಿಮ್ಮ ಕಿಡ್ನಿಗಳು ಹಾಳಾಗಿವೆ ಎಂದರ್ಥ

    June 17, 2025

    ಇಸ್ರೇಲ್-ಇರಾನ್ ಯುದ್ಧ: ಈಗ ಚಿನ್ನ ಖರೀದಿ ಸೂಕ್ತವೇ? ಪರಿಷತ್ ಶಾಸಕ ಟಿ ಎ ಶರವಣ ಹೇಳಿದ್ದೇನು..?

    June 16, 2025

    Israel-Iran conflict.. ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್‌ ಹೆಚ್ಚಳ: ಯಾವ ಎಣ್ಣೆ ಎಷ್ಟು ಏರಿಕೆ ಆಗಿದೆ? ಇಲ್ಲಿದೆ ವಿವರ

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.