ಇಸ್ಲಾಮಾಬಾದ್:ಪಹಲ್ಗಾಮ್ ದಾಳಿಯ ಬಳಿಕ ಜಮ್ಮು ಕಾಶ್ಮೀರದ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರಿದಿದೆ. ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಸೇನೆಯನ್ನು ಗಡಿಯಲ್ಲಿ ಭಾರತದ ಯೋಧರು ಹಿಮ್ಮೆಟ್ಟಿಸುತ್ತಿದ್ದಾರೆ. ಭಾರತದ ಸೇನೆಯ ಈ ಸಮರಾಭ್ಯಾಸ ಪಾಕಿಸ್ತಾನಕ್ಕೆ ನಡುಕವನ್ನು ಉಂಟು ಮಾಡಿದೆ.
ಇದರ ನಡುವೆ ಅಯೋಧ್ಯೆಯ ಹೊಸ ಬಾಬರಿ ಮಸೀದಿಗೆ ಮೊದಲ ಇಟ್ಟಿಗೆಯನ್ನು ಪಾಕಿಸ್ತಾನ ಸೇನಾ ಸೈನಿಕರು ಇಡುವ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮೊದಲ ಅಜಾನ್ ನೀಡುವ ಸಮಯ ದೂರವಿಲ್ಲ ಎಂದು ಹೇಳಿಕೆ ಮೂಲಕ ಪಾಕಿಸ್ತಾನ ಶಾಸಕಿ ಪಲ್ವಾಶಾ ಮೊಹಮ್ಮದ್ ಜೈ ಖಾನ್ ನಾಲಿಗೆ ಹರಿಬಿಟ್ಟಿದ್ದಾರೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಭಾರತದ ಯಾವುದೇ ದುಸ್ಸಾಹಸಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕು ಎಂದು ಪಾಕಿಸ್ತಾನಿ ಶಾಸಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನ ಸಂಸತ್ತಿನ ಮೇಲ್ಮನೆಯಲ್ಲಿ ಪಲ್ವಾಶಾ ಮತ್ತು ಇತರ ಸೆನೆಟರ್‌ಗಳ ಹೇಳಿಕೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಹುದು.