ವಿಜಯಪುರ : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರು, ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಯಾಕಾಗಿದೆ ಅನ್ನೋದು ಗೊತ್ತಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೆ. ತ ಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೆ ಎಂದರು. ಇನ್ನೂ ಪ್ರಕರಣವನ್ನು ಎನ್ಐಎ ವಹಿಸಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಸುಮ್ಮ ಸುಮ್ಮನೆ ಎಲ್ಲಾನೂ ಎನ್ ಐಎ ಅಂದ್ರೇನು. ಟೆರಿಸ್ಟ್ ಪ್ರಕರಣ ಇದ್ದರೆ ಎನ್ ಐಎ. ರಾಜ್ಯ ಸರ್ಕಾರ ಮಾಡುತ್ತೆ. ಇದರಲ್ಲಿ ಮುಚ್ಚುಮರೆ ಯಾಕೆ. ಸರ್ಕಾರ ಯಾವುದೇ ಇದ್ದರೂ ಪೊಲೀಸರು ಇರ್ತಾರೆ. ನಾವು ಬದಲಾವಣೆ ಆಗ್ತೀವಿ.. ಅಧಿಕಾರಿಗಳು ಅವರೇ ಇರ್ತಾರೆ. ನಾವು ಟೆಂಪರರಿ, ಅವರು ಪರ್ಮಿನೆಂಟ್ ಎಂದರು.
ಹಿಂದೂ ಕಾರ್ಯಕರ್ತನ ಹತ್ಯೆ ; ಹಂತಕರು ಯಾರೇ ಆಗಿದ್ರು ಕಠಿಣ ಕ್ರಮ ; ಸಿಎಂ ಸಿದ್ದರಾಮಯ್ಯ
ಇನ್ನೂ ಹಿಂದಿನ ದಿನವೇ ಫೋಟೋ ಹಾಕಿ ಹತ್ಯೆ ಮಾಡ್ತೀವಿ ಎಂಬ ಪೋಸ್ಟ್ ವಿಚಾರವಾಗಿ ಮಾತನಾಡಿ, ತನಿಖೆ ಮಾಡುತ್ತೇವೆ. ನಿರ್ದಾಕ್ಷಿಣ್ಯವಾಗಿ ಉಗ್ರ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ರಕ್ಷಣೆ ಸಿಗಲಿದೆ. ಎಲ್ಲ ಧರ್ಮ, ಜಾತಿಗಳ ಪರವಾಗಿರುವ ಸರ್ಕಾರ ನಮ್ಮದು. ಎಲ್ಲರ ರಕ್ಷಣೆ ಮಾಡ್ತೇವೆ ಎಂದರು.