ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು ಎಂದು ನಟ ಶ್ರೀಮುರಳಿ ಹೇಳಿದ್ದಾರೆ.
ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ನೋವಾಗ್ತಿದೆ. ಇದನ್ನೆಲ್ಲಾ ಯಾರು ಮಾಡಿದ್ದಾರೋ ಅವರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು. ಅಲ್ಲಿ ಸಮಾಧಾನವಿಲ್ಲ. ಈ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಒಬ್ಬ ನಾಗರೀಕನಾಗಿ ಹೇಳಬೇಕು ಅಂದರೆ ಉಗ್ರರ ದಾಳಿ ವಿಷ್ಯ ಕೇಳಿ ಮೈಯಲ್ಲಿ ರಕ್ತ ಕುದಿಯುತ್ತಿದೆ. ಅವರ ಸಂಹಾರ ಆಗೋವರೆಗೂ ನಮಗೆ ನೆಮ್ಮದಿಯಿಲ್ಲ. ಅಮಯರ ಜೀವ ತೆಗೆದಿದ್ದಾರೆ. ಅದಕ್ಕೆ ಉಗ್ರರ ಅಂತ್ಯ ಆಗಲೇಬೇಕು ಎಂದು ಶ್ರೀಮುರಳಿ ಮಾತನಾಡಿದ್ದಾರೆ