ನವದೆಹಲಿ:- ಜಮ್ಮುಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಭಾರತೀಯಮ ರಕ್ತ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಗ್ರರ ದಾಳಿ: ಮೃತರಿಗೆ ಬಾಗಲಕೋಟೆ ಕ್ರೀಡಾಪಟುಗಳಿಂದ ಮೌನಾಚರಣೆ ಸಲ್ಲಿಸಿ ಸ್ವಚ್ಚತಾ ಕಾರ್ಯ!
ಮನ್ ಕಿ ಬಾತ್’ ನ 121 ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಪಹಲ್ಗಾಮ್ ದಾಳಿಯಿಂದ ಸಂತ್ರಸ್ತರು ದುಃಖಿಸುತ್ತಿರುವ ದೃಶ್ಯಗಳನ್ನು ನೋಡಿದರೆ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ. ಪಹಲ್ಗಾಮ್ ದಾಳಿಯಿಂದ ನನಗೆ ತುಂಬಾ ನೋವಾಗಿದೆ. ಇದು ಭಯೋತ್ಪಾದನೆಯ ಬೆಂಬಲಿಗರ ಹತಾಶೆ ಅವರ ಹೇಡಿತನವನ್ನು ತೋರಿಸುತ್ತದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಅಪರಾಧ ಎಸಗಿದವರಿಗೆ, ಬೆಂಬಲಿಗರಿಗೆ, ಸೂತ್ರಧಾರಿಗಳವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದರು.
ಕಾಶ್ಮೀರ ಮತ್ತು ರಾಷ್ಟ್ರದ ಶತ್ರುಗಳು ಈ ಪ್ರದೇಶದ ಗಮನಾರ್ಹ ಪ್ರಗತಿಯನ್ನು ಹಳಿತಪ್ಪಿಸಲು ನಡೆಸಿದ ಹತಾಶ ಪ್ರಯತ್ನವಿದು. ಕಾಶ್ಮೀರ ಇತ್ತೀಚಿನ ವರ್ಷಗಳಲ್ಲಿ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿತ್ತು. ಪ್ರವಾಸೋದ್ಯಮದಲ್ಲಿ ಯುವಕರಿಗೆ ಹೊಸ ಅವಕಾಶ ಸಿಕ್ಕಿತ್ತು ಎಂದು ಹೇಳಿದರು.