ಬೆಂಗಳೂರು: ಸ್ವರ್ಗ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶಿವಮೊಗ್ಗದ ಮಂಜುನಾಥ್, ಹಾವೇರಿ ಮೂಲದ ಭರತ್ ಭೂಷಣ್ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆಂದು ಕುಟುಂಬದ ಜೊತೆ ಕಾಶ್ಮೀರಕ್ಕೆ ಹೋಗಿದ್ದರು ಇನ್ನಿಲ್ಲ. ಇನ್ನೂ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮೃತಪಟ್ಟ ಭರತ್ ಭೂಷಣ್ ಮನೆಗೆ ಎನ್ಐಎ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸುಧೀರ್ಘ 8 ಗಂಟೆಗಳ ಕಾಲ ಪತ್ನಿ ಡಾ.ಸುಜಾತಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ. ನೀವೂ ಕಾಶ್ಮೀರಕ್ಕೆ ಯಾವಾಗ ಹೋಗಿದ್ರಿ, ಎಷ್ಟೋತ್ತಿಗೆ ತಲುಪಿದ್ರಿ? ಉಗ್ರರು ಬಂದಾಗ ನೀವು ಎಲ್ಲಿ ಇದ್ರಿ, ಭರತ್ ಭೂಷಣ್ ಎಲ್ಲಿದ್ರು? ಉಗ್ರರು ಬಂದಾಗ ಯಾವ ಭಾಷೆ ಮಾತಾಡಿದ್ರು. ಅವರ ಮುಖದ ಮೇಲೆ ಏನಾದ್ರು ಮಾರ್ಕ್ ಇತ್ತಾ. ಅವರ ಮುಖ ಚಹರೆ, ವೇಷ ಭೂಷಣ ಇವೆಲ್ಲದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮಾವಿನಹಣ್ಣನ್ನು ರಾತ್ರಿ ವೇಳೆ ತಿಂತೀರಾ!? ಹಾಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ!
ಅಲ್ಲದೇ ಉಗ್ರರ ಸ್ಕೆಚ್ ತೋರಿಸಿ ಕೂಡ ಮಾಹಿತಿ ಪಡೆದಿರುವ ಎನ್‌ಐಎ, ಅವರ ಬಳಿಯಿದ್ದ ಗನ್ ನೋಡಿದ್ರಾ? ಅದು ಯಾವ ರೀತಿ ಇತ್ತು. ಅವರು ನಿಮ್ಮ ಬಳಿ ಏನಾದ್ರು ಮಾತಾಡಿದ್ರಾ? ನೀವು ಅವರಿಗೆ ಏನಾದ್ರು ಉತ್ತರ ಕೊಟ್ರಾ ಹೀಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಎನ್‌ಐಎ ಭರತ್ ಭೂಷಣ್ ಅವರ ಪತ್ನಿ ಹೇಳಿಕೆಯನ್ನು ದಾಖಲು ಮಾಡಿಕೊಂಡು ಹೋಗಿದೆ.