ಇಸ್ಲಾಮಾಬಾದ್: ಪಹಲ್ಗಾಮ್ ನರಮೇಧ ಕನಸಿನಲ್ಲೂ ಬೆಚ್ಚಿ ಬೀಳೋ ಭಯಾನಕ ಕೃತ್ಯ. ದಾಳಿಕೋರರ ಹಿಂದೆ ಬಿದ್ದಿರೋ ಭಾರತೀಯ ಸೇನೆ ರೋಚಕ ಅಂಶಗಳನ್ನು ಕಲೆ ಹಾಕುತ್ತಿದೆ. ಉಗ್ರರು ಅಡಗಿದ್ದ ಮನೆಗಳನ್ನು ಧ್ವಂಸ ಮಾಡಿರುವ ಯೋಧರು, ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದು ಹೇಗೆ ಅನ್ನೋ ಇಂಚಿಂಚೂ ರಹಸ್ಯವನ್ನು ಬೇಧಿಸುತ್ತಿದ್ದಾರೆ.
ಅದಲ್ಲದೆ ಅಲ್ಲಾಹುನೇ ಈ ಯುದ್ಧ ನಿಲ್ಲಿಸಬೇಕು ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿಕೆ ನೀಡಿದ್ದಾರೆ. ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಇತರ ದೇಶಗಳು ಪ್ರಯತ್ನಗಳನ್ನು ಮಾಡಿದರೂ, ಕಾಲ ಕಳೆದಂತೆ ಭಾರತದೊಂದಿಗೆ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!
ಇತ್ತೀಚಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಗಮನಹರಿಸಿದಾಗ, ಕಾಲ ಕಳೆದಂತೆ ಸಂಘರ್ಷದ ಸಾಧ್ಯತೆ ಹೆಚ್ಚುತ್ತಿದ್ದು, ಕಡಿಮೆಯಾಗುತ್ತಿಲ್ಲ. ಆದರೂ ಅನೇಕ ದೇಶಗಳು ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಪಾಕಿಸ್ತಾನ ದಾಳಿ ಎದುರಿಸಿದರೆ ಸೂಕ್ತ ಪ್ರತಿಕ್ರಿಯೆ ನೀಡುವುದು ನಿಶ್ಚಿತ. ಭಾರತದಿಂದ ಉಲ್ಲಂಘನೆಯಾದರೆ, ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮ ಪ್ರತಿಕ್ರಿಯೆಯ ಸ್ವರೂಪವು ಭಾರತದ ಕ್ರಮದಿಂದ ನಿರ್ಧರಿಸಲ್ಪಡುತ್ತದೆ. ನಮ್ಮ ಪ್ರತಿಕ್ರಿಯೆಯ ಬಗ್ಗೆ ಯಾವುದೇ ಸಂದೇಹ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸಂಘರ್ಷದ ಪರಿಸ್ಥಿತಿಯನ್ನು ತಪ್ಪಿಸಲು ದೇವರು ಸಹಾಯ ಮಾಡಲಿ. ಪಾಕಿಸ್ತಾನದ ಪ್ರತಿಕ್ರಿಯೆಯ ಬಗ್ಗೆ ನಾನು ಊಹಿಸಲು ಬಯಸುವುದಿಲ್ಲ. ಆದರೆ ಅದು ಭಾರತದ ಕ್ರಮಕ್ಕಿಂತ ದೊಡ್ಡದಾಗಿರುತ್ತದೆ ಎಂದು ತಿಳಿಸಿದ್ದಾರೆ.