ಭಾರತ ಕೊಡುತ್ತಿರುವ ಏಟಿಗೆ ಪಾಕ್ ತತ್ತರಿಸಿ ಹೋಗಿದೆ. ಹೀಗಿದ್ರೂ ಪಾಪಿಸ್ತಾನ ಭಾರತದ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿ ವಿಫಲವಾಗುತ್ತಿದೆ. ಭಾರತದ ದಾಳಿಗೆ ಶೇಕ್ ಆಗಿರುವ ಪಾಕ್ ಸಾಲಕ್ಕಾಗಿ ಅಂಗಲಾಚಿದೆ.
ಪಹಲ್ಗಾಮ್ ದಾಳಿ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಇ ಪಾಕ್ ಕ್ರಿಮಿಗಳ ತಾಣಗಳನ್ನು ಉಡೀಸ್ ಮಾಡಿತ್ತು. ಅದರ ಬೆನ್ನಲ್ಲೇ ಪಾಕ್ ಭಾರತದ ಮಢಲೆ ಪ್ರತಿದಾಳಿ ನಡೆಸಿತು. ಆದ್ರೆ ಭಾರತೀಯ ಸೇನೆ ಮುಂದೆ ಪಾಕ್ ಆಟ ನಡೆದಿಲ್ಲ. ಇದರ ನಡುವೆ ಭಾರತ ನಡೆಸಿದ ಡ್ರೋನ್ ದಾಳಿಯಿಂದ ಪಾಕಿಸ್ತಾನದಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ಇದರಿಂದ ಪಾಕ್ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ.
“ಶತ್ರುಗಳಿಂದ ಉಂಟಾದ ಭಾರೀ ನಷ್ಟಗಳ ನಂತರ ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರುಪೇಟೆ ಕುಸಿತದ ಮಧ್ಯೆ, ಉಲ್ಬಣವನ್ನು ಶಮನಗೊಳಿಸಲು ಸಹಾಯ ಮಾಡುವಂತೆ ನಾವು ಅಂತರರಾಷ್ಟ್ರೀಯ ಪಾಲುದಾರರನ್ನು ಒತ್ತಾಯಿಸುತ್ತೇವೆ” ಎಂದು ಪಾಕ್ ಮನವಿ ಮಾಡಿಕೊಂಡಿದೆ. ಪಾಕಿಸ್ತಾನದ ಆರ್ಥಿಕ ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗದ ಸಾಮಾಜಿಕ ಜಾಲತಾಣ “x” ಖಾತೆಯಲ್ಲಿ ಸಾಲಕ್ಕಾಗಿ ಅಂಗಲಾಚಿದೆ.
ಪಾಕ್ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳೋದೇನು ಬೇಡ. ದಿವಾಳಿಯಾಗಿರುವ ಪಾಕಿಸ್ತಾನ ಭಾರತದ ಮೇಲೆ ವಿಷ ಕಕ್ಕೋದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಊಟ, ವಸತಿ, ಶಿಕ್ಷಣಕ್ಕಾಗಿ ಪರದಾಡುವ ಸ್ಥಿತಿಯಲ್ಲಿರುವ ಪಾಕಿಸ್ತಾನ ಕಾಲ್ ಕೆರೆದು ಭಾರತದ ಜೊತೆ ಯುದ್ದಕ್ಕೆ ನಿಂತಿದೆ. ಅದರ ಪ್ರತಿಫಲ ಇಂದು ಅಕ್ಷರಶಃ ದಿವಾಳಿಯಾಗಿ ಸಾಲಕ್ಕಾಗಿ ಜಗತ್ತಿನ ಎದುರು ಅಂಗಲಾಚಿದೆ.