ಅಮಾಯಕರ ಬಲಿ ಪಡೆದ ಉಗ್ರರ ವಿರುದ್ಧ ಭಾರತ ಕೊನೆಗೂ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 22ರಂದು ಪಹಲ್ಗಾಮ್ನ ಬೈಸರನ್ನಲ್ಲಿ ಅಮಾಯಕ ಹಿಂದೂಗಳ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ನಡೆಸಿ, ಬರೋಬ್ಬರಿ 26 ಮಂದಿಯ ಜೀವವನ್ನು ತೆಗೆದಿದ್ದರು. ಈ ಕೃತ್ಯದ ಬೆನ್ನಲ್ಲೇ ಇಡೀ ದೇಶ ಪಾಕಿಸ್ತಾನದ ಮೇಲೆ ಕೆಂಡ ಕಾರಿತ್ತು.
ಒಂದು ಕಡೆ ಪಾಪಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಅಂತ ಆಕ್ರೋಶ ವ್ಯಕ್ತವಾಗುತ್ತಿತ್ತು. ಮತ್ತೊಂದು ಕಡೆ ಉಗ್ರರನ್ನು ಉಡಾಯಿಸಬೇಕೆಂದು ಭಾರತ ಸರ್ಕಾರ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿತ್ತು. ಅದರಂತೆ ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ.
ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ’ ಆರಂಭಿಸಿವೆ. ಈ ಆಪರೇಷನ್ ಸಿಂಧೂರಗೆ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 ನಿಮಿಷದಲ್ಲಿ ಪಾಕ್ನ 9 ನೆಲೆಯನ್ನು ಉಡೀಸ್ ಮಾಡಿದೆ.
ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!
ಜಸ್ಟ್ 23 ನಿಮಿಷದಲ್ಲೇ 70 ಉಗ್ರರು ಮೃತಪಟ್ಟಿದ್ದಾರೆ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.
ಆಪರೇಷನ್ ಸಿಂಧೂರ್ ಎನ್ನುವ ಹೆಸರು ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದೆ. ಗುರುಗ್ರಾಮದ ಹಿಮಾಂಶಿ ನರ್ವಾಲ್ ಏಪ್ರಿಲ್ 16ರಂದು ವಿವಾಹ ಆಗಿದ್ದ ತಮ್ಮ ಪತಿ ಲೆಫ್ಟಿನೆಂಟ್ ವಿನಯ್ ಜೊತೆ ಹನಿಮೂನ್ ಗೆ ಬಂದಿದ್ದರು. ಈ ವೇಳೆ ವಿನಯ್ ಅವರನ್ನು ಭೀಕರವಾಗಿ ಉಗ್ರರು ಕೊಂದು ಹಾಕಿದ್ದರು. ಜೈಪುರದ ಪ್ರಿಯಾಂಕಾ ಶರ್ಮಾ ಕೂಡ ಪತಿ ರೋಹಿತ್ ಜೊತೆ ಹನಿಮೂನ್ ಗೆ ಬಂದು ಕುಂಕುಮ ಕಳೆದುಕೊಂಡಿದ್ದರು.
ಶಿಮ್ಲಾ ನಿವಾಸಿ ಅಂಜಲಿ ಠಾಕೂರ್ ಅವರು ತಮ್ಮ ಪತಿ ವಿವೇಕ್ ಠಾಕೂರ್ ಜೊತೆ ಪ್ರವಾಸಕ್ಕೆಂದು ತೆರಳಿದ್ದರು, ಅವರು ಸಹ ಇದೇ ವರ್ಷದ ಏಪ್ರಿಲ್ 12 ರಂದು ವಿವಾಹವಾಗಿದರು. ಉಗ್ರರ ದಾಳಿಗೆ ಪತಿಯನ್ನು ಕಳೆದುಕೊಂಡಿದ್ದರು. ಕರ್ನಾಟಕದ ಮಂಜುನಾಥ ರಾವ್ ಮತ್ತು ಭರತ್ ಭೂಷಣ್ ಅವರು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು.
ಮದ್ವೆಯಾಗಿ ವಾರವಾಗುವ ಮುನ್ನವೇ ಹಣೆಯ ಸಿಂಧೂರವನ್ನು ಪಾಪಿಗಳು ಅಳಿಸಿದ್ದರು. ಕಣ್ಣೆದುರೇ ಪತಿಯನ್ನು ಹತ್ಯೆಗೈದು ರಾಕ್ಷಸೀಯ ಕೃತ್ಯ ಎಸಗಿದ್ದರು. ಇದಕ್ಕೆ ʼಅಪರೇಷನ್ ಸಿಂಧೂರʼ ಎನ್ನುವ ಹೆಸರಿನಡಿಯಲ್ಲಿ ಭಾರತ ಪ್ರತೀಕಾರವನ್ನು ತೀರಿಸಿದೆ.
ಮುಳ್ಳನ್ನು ಮುಳ್ಳಿನಿಂದಲೆ ತಗೆಯಬೇಕು ಎನ್ನುವ ಸೂತ್ರದಡಿ ಆಪರೇಷನ್ ಸಿಂಧೂರಕ್ಕೆ ಭಾರತ ಚಾಲನೆ ನೀಡಿತ್ತು. ಇದರಂತೆ ಭಾರತ ʼಆಪರೇಷನ್ ಸಿಂಧೂರʼ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿದೆ.
ಭಾರತೀಯ ಹೆಣ್ಮಕ್ಕಳ ಕಣ್ಣೀರಿಗೆ ಕಾರಣವಾದ, ಅವರ ಸಿಂಧೂರವನ್ನು ಅಳಿಸಿ ಹಾಕಿದ ಉಗ್ರರಿಗೆ ತಕ್ಕ ಉತ್ತರವನ್ನು ನಿಡಲು ‘ಆಪರೇಷನ್ ಸಿಂಧೂರ್’ ಎಂದೇ ಹೆಸರಿಡಲಾಗಿದೆ. ಈ ಮೂಲಕ ಪ್ರತೀಕಾರದ ಜೊತೆ ಖಡಕ್ ಸಂದೇಶವನ್ನೂ ಉಗ್ರರಿಗೆ ನೀಡಲಾಗಿದೆ.