Close Menu
Ain Live News
    Facebook X (Twitter) Instagram YouTube
    Sunday, July 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಪಣಜಿ: ಗೋವಾದಲ್ಲಿ ಅತಿ ಶೀಘ್ರದಲ್ಲಿ ಕನ್ನಡ ಭವನ ನಿರ್ಮಾಣ – ಸಚಿವ ಶಿವರಾಜ್ ತಂಗಡಗಿ

    By AIN AuthorDecember 17, 2023
    Share
    Facebook Twitter LinkedIn Pinterest Email
    Demo

    ಪಣಜಿ: ಗೋವಾ ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಸ್ಥಾಯಿಕರಾಗಿದ್ದಾರೆ. ಇಡೀ ಗೋವಾದ ಜನಸಂಖ್ಯೆ 15 ಲಕ್ಷ ಕರ್ನಾಟಕದಿಂದ ಗೋವಾದಲ್ಲಿ ಉದ್ಯೋಗಕ್ಕಾಗಿ ಬಂದು ಹೋಗುವವರ ಸಂಖ್ಯೆ ಕೂಡ ಇದಕ್ಕಿಂತ ಹೆಚ್ಚಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡಿಗರಿರುವ ಗೋವಾದಲ್ಲಿ ಶೀಘ್ರದಲ್ಲಿಯೇ ಕನ್ನಡ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಗೋವಾ ಕನ್ನಡಿಗರಿಗೆ ಭರವಸೆ ನೀಡಿದರು.

    ಗೋವಾದ ವಾಸ್ಕೊ ಜುವಾರಿನಗರದಲ್ಲಿರುವ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಗೋವಾದ ವಿವಿಧ ಸರ್ಕಾರಿ ಇಲಾಖೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಬಾರಿ ಗೋವಾದಲ್ಲಿ ಕನ್ನಡ ಭವನಕ್ಕೆ ಕನಿಷ್ಠ ಒಂದು ಎಕರೆ ಅಥವಾ ಅರ್ಧ ಎಕರೆಯನ್ನಾದರೂ ಭೂಮಿಯನ್ನೂ ಖರೀದಿಸುತ್ತೇವೆ. ಇಷ್ಟು ಹೊತ್ತಿಗಾಗಲೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕತ್ತು, ಬೇರೆ ರಾಜ್ಯಗಳಲ್ಲಿ ಕನ್ನಡ ಭವನ ನಿರ್ಮಾಣವಾಗಿದೆ.

    ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಕೂಡ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡೋಣ ಎಂದಿದ್ದಾರೆ. ಇದೀಗ ಗೋವಾದಲ್ಲಿ ಎರಡು ಕಡೆಗಳಲ್ಲಿ ಜಾಗ ವೀಕ್ಷಣೆ ಮಾಡಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ನುಡಿದರು.

    ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಮಾತನಾಡಿ  ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು ಎಂಬುದು ನಮ್ಮ ಬಹು ವರ್ಷಗಳ ಕನಸಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕನ್ನಡ ಭವನಕ್ಕಾಗಿ ಸತತ ಪ್ರಯತ್ನ ನಡೆಸುತ್ತಾ ಬಂದಿದ್ದೇವೆ. ಆದರೆ ಪ್ರಸಕ್ತ ಬಾರಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದರು. ಈ ಸಂದರ್ಭದಲ್ಲಿ ಗೋವಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಚಿವ ಶಿವರಾಜ್ ತಂಗಡಗಿ ರವರಿಗೆ ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ.ಸಿದ್ಧಣ್ಣ ಮೇಟಿ ಮನವಿ ಪತ್ರ ಸಲ್ಲಿಸಿದರು.

    ವರದಿ:- ಬಾಳು ತೇರದಾಳ AIN ನ್ಯೂಸ್ ಬೆಳಗಾವಿ.

    Demo
    Share. Facebook Twitter LinkedIn Email WhatsApp

    Related Posts

    ಒಬಿಸಿ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ ವಿಚಾರ: ವದಂತಿಗೆ ತೆರೆ ಎಳೆದ CM ಕಚೇರಿ!

    July 6, 2025

    ಹೃದಯಾಘಾತಕ್ಕೆ ಖ್ಯಾತ ಹಾಲಿವುಡ್ ನಟ ಸಾವು!

    July 5, 2025

    ಬ್ಯಾಂಕ್ ವಂಚನೆ ಪ್ರಕರಣ: ಅಮೆರಿಕದಲ್ಲಿ ನೀರವ್ ಮೋದಿ ಸಹೋದರ ನಿಹಾಲ್ ಮೋದಿ ಅರೆಸ್ಟ್..!

    July 5, 2025

    ಅಮರನಾಥ ಯಾತ್ರೆಗಾಗಿ ತೆರಳುತ್ತಿದ್ದ 5 ಬಸ್’ಗಳ ನಡುವೆ ಸರಣಿ ಅಪಘಾತ: 36 ಮಂದಿಗೆ ಗಂಭೀರ ಗಾಯ!

    July 5, 2025

    ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಮೇಲೆ ಗುಂಡಿನ ದಾಳಿ..! ಸ್ಥಳದಲ್ಲೇ ಸಾವು

    July 5, 2025

    ಭೀಕರ ರಸ್ತೆ ಅಪಘಾತ: ಮದುವೆ ದಿಬ್ಬಣಕ್ಕೆ ಹೊರಟಿದ್ದ 8 ಮಂದಿ ಸ್ಥಳದಲ್ಲೇ ಸಾವು!

    July 5, 2025

    ರೈತನಾಗಿ ಹೊಲ ಉಳುಮೆ ಮಾಡಿದ ಸಿಎಂ..! VIDEO ವೈರಲ್

    July 5, 2025

    ಸ್ಯಾನಿಟರಿ ಪ್ಯಾಡ್ ಮೇಲೆ ರಾಹುಲ್ ಗಾಂಧಿ ಫೋಟೋ: ವಿವಾದಕ್ಕೀಡಾದ ಕಾಂಗ್ರೆಸ್ ನಾಯಕನ ಚಿತ್ರ!

    July 5, 2025

    TVK ಪಕ್ಷದ ಸಿಎಂ ಅಭ್ಯರ್ಥಿ ನಾನೇ ಎಂದ ದಳಪತಿ..ಬಿಜೆಪಿ ಜೊತೆ ಮೈತ್ರಿ ಇಲ್ಲ..ವಿಜಯ್‌ ಏಕ್‌ ಮಾರ್ ದೋ ತುಕ್ಡ್!‌

    July 4, 2025

    ಶಿಕ್ಷಣದ ಹೆಸರಿನಲ್ಲಿ Instagram ನಕಲಿ ಖಾತೆ ತೆರೆದು ವಂಚನೆ: 18 ಲಕ್ಷ ಕಳೆದುಕೊಂಡ MBA ವಿದ್ಯಾರ್ಥಿನಿ..!

    July 4, 2025

    Himachal Pradesh: ಹಿಮಾಚಲ ಪ್ರದೇಶದಲ್ಲಿ ಮಳೆ ಅಬ್ಬರ: 63 ಜನ ಸಾವು – ಹೆಚ್ಚಿದ ಆತಂಕ

    July 4, 2025

    200 ಕೋಟಿ ವಂಚನೆ ಕೇಸ್: ದೆಹಲಿ ಹೈಕೋರ್ಟ್’ನಿಂದ ಜಾಕ್ವಲಿನ್ ಅರ್ಜಿ ವಜಾ!

    July 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.