ಪುಟ್ಟ ಮಕ್ಕಳಿಗೆ ನೀಡುವ ಆಹಾರ ವಿಚಾರದಲ್ಲಿ ಪೋಷಕರು ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಚಿಕ್ಕ ಮಕ್ಕಳಿಗೆ ನೀವು ನೀಡುವ ಆಹಾರ ಅವರ ಬೆಳವಣಿಗೆ ಮತ್ತು ಆರೋಗ್ಯವನ್ನು ನಿರ್ಧರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಹಾರವೂ ಅಗತ್ಯ. ಏಕೆಂದರೆ ಸೋಂಕು ಯಾವುದೇ ಇದ್ದರೂ ಅದು ಮಕ್ಕಳ ಮೇಲೆ ಸುಲಭವಾಗಿ ಪರಿಣಾಮ ಬೀರುತ್ತದೆ. ಅಲ್ಲದೇ ಮಕ್ಕಳಾಗಿದ್ದಾಗ ನಾವು ಅವರಿಗೆ ನೀಡುವ ಪೋಷಣೆಯು ಅವರು ಬೆಳೆದ ನಂತರ ಕೂಡ ಅವರ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಣೆಯ ಹೆಸರಿನಲ್ಲಿ ಮಕ್ಕಳಿಗೆ ಆಹಾರ ನೀಡುವುದು ಸಹ ಅಪಾಯಕಾರಿ ಆಗಿದೆ.
ನೀವು ರಕ್ತದಾನ ಮಾಡೋಕು ಮುನ್ನ ಈ ಆಹಾರಗಳನ್ನು ತಪ್ಪದೆ ಸೇವನೆ ಮಾಡಬೇಕು!
ವಿಶ್ವದ ಅತಿದೊಡ್ಡ ಗ್ರಾಹಕ ಉತ್ಪನ್ನಗಳ ಕಂಪನಿ, ತನ್ನ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ. ಶಿಶುಗಳಿಗಾಗಿ ಒದಗಿಸುವ ಸೆರೆಲಾಕ್ನಂತಹ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿರುವುದು ಕಂಡುಬಂದಿದೆ.
ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಮಕ್ಕಳ ಉತ್ಪನ್ನಗಳ ಪ್ರತಿ ಸೇವನೆಯಲ್ಲಿ ಸುಮಾರು 3 ಗ್ರಾಂ ಸಕ್ಕರೆ ಅಂಶ ಇದೆ. ಹೀಗಿದ್ದೂ ಪ್ಯಾಕೆಟ್‌ನಲ್ಲಿ ಸಕ್ಕರೆ ಪ್ರಮಾಣದ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.
ತನಿಖಾ ಸಂಸ್ಥೆಗಳಾದ ಪಬ್ಲಿಕ್ ಐ ಮತ್ತು IBFAN ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಮಾರಾಟವಾದ ಕಂಪನಿಯ ಉತ್ಪನ್ನಗಳ ಮಾದರಿಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಬೆಲ್ಜಿಯಂನಲ್ಲಿ ನಡೆದ ಪ್ರಯೋಗಾಲಯದಲ್ಲಿ ಈ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ನೆಸ್ಲೆ ಮಾರಾಟ ಮಾಡುವ ಸೆರೆಲಾಕ್ನಲ್ಲಿ ಸಕ್ಕರೆ ಅಂಶ ಕಂಡುಬಂದಿಲ್ಲ. ಆದರೆ ಇಥಿಯೋಪಿಯಾ ಮತ್ತು ತೈಲ್ಯಾಂಡ್ನಲ್ಲಿ ಮಾರಾಟವಾಗುವ ಸೆರೆಲಾಕ್ನ ಒಂದು ಪ್ಯಾಕೇಟ್ನಲ್ಲಿ ಕ್ರಮವಾಗಿ 5 ಮತ್ತು 6 ಗ್ರಾಂ ಸಕ್ಕರೆ ಪ್ರಮಾಣ ಇದೆ ಎಂದು ವರದಿ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ನಿಗೆಲ್ ರೋಲಿನ್ಸ್ ಪ್ರತಿಕ್ರಿಯಿಸಿ.. ಸ್ವಿಟ್ಜರ್ಲೆಂಡ್‌ನಲ್ಲಿ ನೆಸ್ಲೆ ಉತ್ಪನ್ನಗಳಿಗೆ ಸಕ್ಕರೆ ಸೇರಿಸಿಲ್ಲ ಎಂಬುವುದು ಗೊತ್ತಾಗಿದೆ. ಆದರೆ ಬಡ ರಾಷ್ಟ್ರಗಳಲ್ಲಿ ಸಕ್ಕರೆ ಅಂಶಗಳನ್ನು ಬಳಸಿಕೊಂಡಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಎರಡು ವಿಚಾರಗಳು ಪ್ರಶ್ನೆಯನ್ನು ಹುಟ್ಟಿಹಾಕಿದೆ ಎಂದು ಅವರು ಹೇಳಿದ್ದಾರೆ. ನೆಸ್ಲೆಯ ಈ ದ್ವಿಮುಖ ಮಾನದಂಡದ ಬಗ್ಗೆ ಆತಂಕ ಎದುರಾಗಿದೆ.