ಕೋಲಾರ: ಬೆಳದು ನಿಂತಿದ್ದ ಮಗ ಮನೆಯ ಜವಾಬ್ದಾರಿ ಇಲ್ಲದೇ ಸ್ನೇಹಿತರೊಂದಿಗೆ ಓಡಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ ತಂದೆ ತಾಯಿ ಮಗನಿಗೆ ಬೈದು ಬುದ್ದಿವಾದ ಹೇಳಿದ್ದಾರೆ. ಹೀಗೆ ತಂದೆತಾಯಿ ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಕುಂಬಾರಪಾಳ್ಯದಲ್ಲಿ ನಡೆದಿದೆ.
ಕುಂಬಾರಪಾಳ್ಯ ನಿವಾಸಿ ಗಣೇಶ್ (29) ಮೃತನಾಗಿದ್ದು, ಗಣೇಶ್ ವರ್ಷದ ಹಿಂದೆಯಷ್ಟೇಗೆ ಗಣೇಶ್ಗೆ ಮದುವಯಾಗಿತ್ತು. ಆದರೆ ಮದುವೆಯಾಗಿದ್ದರು ಗಣೇಶ್ ಬೇಜಾವಾಬ್ದಾರಿತನಿಂದ ವರ್ತಿಸುತ್ತಿದದ್ದ. ಹೆಂಡತಿ ಮಕ್ಕಳನ್ನ ಚನ್ನಾಗಿ ನೋಡಿಕೋ, ಜವಾಬ್ದಾರಿಯಿಂದಿರು ಎಂದಿದ್ದ ತಂದೆ ತಾಯಿ ಬುದ್ದಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಾನುವಾರಗಳ ಆರೋಗ್ಯದ ದೃಷ್ಟಿಯಿಂದ ಲಿಸಿಕೆ ಹಾಕಿಸಿ : ಉಪನಿರ್ದೇಶಕ ಜಿ. ಎನ್. ರಮೇಶ್
ಸದ್ಯ ಈ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ.