ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಕೊಲೆ ಆರೋಪಿ ದರ್ಶನಗ ಸದ್ಯ ಹೊರಗಡೆ ಇದ್ದಾರೆ. ಆದರೂ ದಾಸನಿಗೆ ಇನ್ನೂ ಟೆನ್ಷನ್ ತಪ್ಪಿಲ್ಲ. ಯಾಕೆಂದರೆ ದರ್ಶನ್ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ವಿಚಾರಣೆ ನಿನ್ನೆ (ಏ. 22ರಂದು) ನಡೆದಿದೆ.
ರಾಜ್ಯ ಪೊಲೀಸ್ ಪರ ದರ್ಶನ್ ಅವರ ಜಾಮೀನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ವಕೀಲ ಸಿದ್ದಾರ್ಥ್ ಲೂಥ್ರಾ ವಾದ ಮಾಡಿದ್ದಾರೆ. ದರ್ಶನ್ ಪರ ವಕೀಲ ಮನು ಸಿಂಘ್ವಿ ವಾದ ಮಾಡಿದ್ದಾರೆ. ನಿನ್ನೆ ನಡೆದ ವಿಚಾರಣೆ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಯಾಗಿದೆ. ದರ್ಶನ್‌ಗೆ ಮದುವೆ ಆಗಿದೆಯೇ ? ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂಬ ಪ್ರಶ್ನೆಯನ್ನು ನ್ಯಾಯಾಧೀಶರು ಕೇಳಿದ್ದಾರೆ. ಇದಕ್ಕೆ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.
ಸಿದ್ದಾರ್ಥ್ ಲೂಥ್ರಾ ಸುಪ್ರೀಂ ಕೋರ್ಟ್ನಲ್ಲಿ ದರ್ಶನ್-ಪವಿತ್ರಾ ಗೌಡ ಸಂಬಂಧ ವಿವರಿಸುವಾಗ ಮಿಸ್ಟ್ರೆಸ್ಟ್ ಎಂಬ ಪದವನ್ನು ಬಳಸಿದ್ದಾರೆ. ಮಿಸ್ಟ್ರೆಸ್ ಎಂದರೆ ಅಧಿಕಾರದಲ್ಲಿರುವ ಅಥವಾ ದೊಡ್ಡ ಸ್ಥಾನದಲ್ಲಿರುವ ಮಹಿಳೆ, ಎರಡನೇ ಅರ್ಥ ವಿವಾಹಿತ ಪುರುಷನೊಂದಿಗೆ ದೀರ್ಘಕಾಲದ ಲೈಂಗಿ*ಕ ಸಂಬಂಧ ಹೊಂದಿರುವ ಮಹಿಳೆ ಎಂದರ್ಥ..
ಇನ್ನು ಇದೇ ಸಮಯದಲ್ಲಿ ದರ್ಶನ್ ಏನು ರಾಜಕಾರಣಿನಾ ? ಎಂದು ಕೂಡ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ಆಗ ವಕೀಲರು ಇಲ್ಲ ಜನಪ್ರಿಯ ನಟ ಎಂದು ಹೇಳಿದ್ದಾರೆ. ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ ಎಲ್ಲರಿಗೂ ಜಾಮೀನು ಸಿಕ್ಕಿದೆ ಎಂದು ಹೇಳಿದ್ಧಾರೆ.