ಆಂಧ್ರ ಉಪಮುಖ್ಯಮಂತ್ರಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಮಗ ಸಿಂಗಾಪುರದಲ್ಲಿ ನಡೆದ ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದು, ಇದೀಗ ಫೋಟೋ ವೈರಲ್ ಆಗುತ್ತಿದೆ. ಪವನ್ ಪುತ್ರ ಮಾರ್ಕ್ ಶಂಕರ್ ಗೆ ಸುಟ್ಟ ಗಾಯಗಳಾಗಿದ್ದು, ನಿನ್ನೆಯೇ ದಂಪತಿ ಸಮೇತ ಪವರ್ ಸ್ಟಾರ್ ಸಿಂಗಾಪುರಕ್ಕೆ ಹಾರಿದ್ದರು, ಇಂದು ಪವನ್ ಸಹೋದರ ಮೆಗಾಸ್ಟಾರ್ ಚಿರಂಜೀವಿ ದಂಪತಿ ಸಿಂಗಾಪುರಕ್ಕೆ ತೆರಳಿ ಮಾರ್ಕ್ ಶಂಕರ್ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
ಬೆಂಕಿಯ ಅವಘಡದಿಂದ ರಕ್ಷಿಸಲ್ಪಟ್ಟ ಮಾರ್ಕ್ ಶಂಕರ್ ಆಮ್ಲಜನಕ ಮಾಸ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪುಟ್ಟ ಮಗುವಿನ ತೋಳಲ್ಲಿ ಗಾಯಗಳಿದ್ದು, ಅದಕ್ಕೆ ಬ್ಯಾಂಡೇಜ್ ಹಾಕಲಾಗಿದೆ. ಈ ನೋವಿನ ನಡುವೆಯೂ ಪವನ್ ಪುತ್ರ ಹೆಬ್ಬೆರಳುಗಳನ್ನು ಮೇಲಕ್ಕೆತ್ತಿ thumbs-up ಸೂಚಿಸಿದ್ದಾರೆ.
ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೋವಾ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್. ಬೇಸಿಗೆ ಶಿಬಿರಕ್ಕೆ ಸಿಂಗಾಪುರಕ್ಕೆ ತೆರಳಿದ್ದಾಗ ಅಲ್ಲಿ ಅವಘಡ ಸಂಭವಿಸಿದೆ. ಪವನ್ ಕಲ್ಯಾಣ್ಗೆ ಒಟ್ಟು ನಾಲ್ಕು ಮಂದಿ ಮಕ್ಕಳಿದ್ದಾರೆ. ಎರಡನೇ ಪತ್ನಿ ರೇಣು ದೇಸಾಯಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಅನ್ನಾ ಲೆಜ್ನೋನಾಗೂ ಸಹ ಒಂದು ಗಂಡು ಒಂದು ಹೆಣ್ಣು ಮಗುವಿದೆ.