ಬೆಂಗಳೂರು:- ನೀವು ಕೂಡ ವಿಧಾನಸೌಧ ನೋಡ್ಬೇಕು ಅನ್ಕೊಂಡಿದ್ದೀರಾ.. ಇನ್ಮುಂದೆ ಫ್ರೀ ಇಲ್ಲ, ದುಡ್ಡು ಕಟ್ಟಿ ಪ್ರವೇಶ ಪಡೆಯಬೇಕು. ಎಸ್, ವಿಧಾನಸೌಧಕ್ಕೆ ಹೋಗಲು ಬಯಸುವ ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ನಿಗದಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರವಾಸೋದ್ಯಮ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ವಿಧಾನಸೌಧ ನೋಡಲಿಕ್ಕೂ ದುಡ್ಡು: ಪ್ರವಾಸೋದ್ಯಮ ಹೆಸರಿನಲ್ಲಿ ಹಣ ವಸೂಲಿಗೆ ನಿಂತಿದೆಯಾ ಸರ್ಕಾರ ..?
ವಿಧಾನಸೌಧ ವೀಕ್ಷಣೆಗೆ ಗೈಡೆಡ್ ಟೂರ್ ವ್ಯವಸ್ಥೆ ಜಾರಿಗೆ ಚಿಂತಿಸಿರುವ ರಾಜ್ಯ ಸರ್ಕಾರವು, ವಿಧಾನಸೌಧವನ್ನ ಪ್ರವಾಸಿ ತಾಣವಾಗಿ ಮಾಡಲು ಹೊರಟಿದೆ. ಪ್ರವಾಸೋಧ್ಯಮ ಇಲಾಖೆ ಇಂದ ಗೈಡ್ ಟೂರ್ ಮಾಡಲು ಅವಕಾಶ ಕೋರಲಾಗಿದ್ದು, ಇದಕ್ಕೆ ಷರತ್ತು ಬದ್ಧವಾಗಿ ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಅದರಂತೆ ಪ್ರವೇಶ ಶುಲ್ಕ ನೀಡಿ ಒಳಗೆ ಬರಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ವಿಧಾನಸೌಧ ನೋಡಲು ಷರತ್ತು:-
* ಸಾರ್ವತ್ರಿಕ ರಜೆ ದಿನದಂದು ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ಅವಕಾಶ.
* 30ಜನರ ತಂಡದೊಂದಿಗೆ ವೀಕ್ಷಣೆಗೆ ಅವಕಾಶ..
* ಆನ್ ಲೈನ್ ಮುಖಾಂತರ ಟಿಕೆಟ್ ಬುಕ್ ಮಾಡಿಕೊಳ್ಳಬೇಕು.
* ಪ್ರವೇಶ ದರವನ್ನ ನೀಡಿ ಬರಬೇಕು…
* ಪೊಲೀಸ್ ಭದ್ರತಾ ಸೂಚನೆ ಪಾಲಿಸಬೇಕು..
* ಅಧಿಕೃತ ದಾಖಲೆಯನ್ನು ನೀಡಿ ಪ್ರವೇಶ ಮಾಡಬೇಕು.
* ವಿಧಾನಸೌಧದ ಕಟ್ಟಡ, ಆವರಣಕ್ಕೆ ಹಾನಿಯಾಗದಂತೆ ಸಹಕರಿಸಬೇಕು..
* ಕಡ್ಡಾಯವಾಗಿ ಎಲ್ಲಾ ನಿಯಮಗಳನ್ನು ಪಾಲಿಸಬೇಕು..