ಧಕ್ ಧಕ್ ಅಂದ್ರೆ ತಕ್ಷಣ ನೆನಪಾಗುವ ಹೆಸರೇ ಮಾಧುರಿ ದೀಕ್ಷಿತ್. ಧಕ್ ಧಕ್ ಅಂತಾ ಅನಿಲ್ ಕಪೂರ್ ಜೊತೆ ಕುಣಿದು ಪಡ್ಡೆಗಳ ನಿದ್ದೆ ಕದ್ದ ಮದನಾರಿ ಮಾಧುರಿ. 90ರ ದಶಕದ ಮಾಧುರಿ ಗೆಟಪ್ ನಲ್ಲೀಗ ದಿಶಾ ಪಠಾಣಿ ಕಾಣಿಸಿಕೊಂಡಿದ್ದಾರೆ.
ಕಿತ್ತಳೆ ಬಣ್ಣದ ಸೀರೆಯಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ದಿಶಾ ಪಠಾಣಿ ಕ್ಯಾಮೆರಾಗೆ ಕಣ್ಣುಗೆ ಹೊಡೆದಿದ್ದಾರೆ.
ದಿಶಾ ಗ್ಲಾಮರ್ ರಂಗು ನೋಡಿ ಅಭಿಮಾನಿಗಳು ಇದು ಸೌಂದರ್ಯ ಸಮರ ಎಂದು ಕೊಂಡಾಡುತ್ತಿದ್ದಾರೆ.
ದಿಶಾ ಸಿಕ್ಕಾಪಟ್ಟೆ ಹಾಟ್. ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸಿನಿಮಾಗಳಿಂತ ದಿಶಾ ಹೆಚ್ಚು ಶೈನ್ ಆಗಿದ್ದು ಐಟಂ ನಂಬರ್ ಮೂಲಕ. ಮೈಚಳಿ ಬಿಟ್ಟು ಈಕೆ ಕುಣಿಯೋದು ನೋಡಿದ್ರೆ ಡ್ಯಾನ್ಸಿಂಗ್ ಕ್ವೀನ್ ಅಂತಾ ಅಭಿಮಾನಿಗಳು ಕರೆಯುತ್ತಾರೆ.
ದಿಶಾ ಪಟಾನಿ ಡೇಟಿಂಗ್ ವಿಚಾರದಲ್ಲಿಯೇ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಟೈಗರ್ ಶ್ರಾಫ್ ಗರ್ಲ್ಫ್ರೆಂಡ್ ಅನ್ನುವ ಕಾರಣಕ್ಕೂ ದಿಶಾ ಬಾಲಿವುಡ್ನಲ್ಲಿ ಎಲ್ಲರ ಕಣ್ಣುಕುಕ್ಕಿದ್ದಾರೆ. ಸದ್ಯ ಹಲವು ಚಿತ್ರಗಳಲ್ಲಿ ಈ ಬೋಲ್ಡ್ ಬ್ಯೂಟಿ ನಟಿಸುತ್ತಿದ್ದಾರೆ.