ನವದೆಹಲಿ: ಗುಜರಾತ್ ನ ಅಹಮದಾಬಾದ್ ನಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ-171 ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಪತನಗೊಂಡಿರುವುದು ದೇಶ ಮತ್ತು ಇಡೀ ವಾಯುಯಾನ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಗುರುವಾರ ಮಧ್ಯಾಹ್ನ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನವು ಮೇಘನದಿ ನಗರ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದ ಮೇಲೆ ಅಪ್ಪಳಿಸಿತು.
ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!
ಇನ್ನೂ ವಿಮಾನ ಪತನವಾಗುವ ಮೊದಲು ಪೈಲಟ್ ಎಟಿಸಿಗೆ ‘ಮೇಡೇ’ ಸಂದೇಶ (ಅಪಾಯವನ್ನು ಸೂಚಿಸುವ ಸಂದೇಶ) ಕಳುಹಿಸಿದ್ದರು. ಅಪಘಾತಕ್ಕೀಡಾದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಕಮಾಂಡರ್ ಕ್ಲೈವ್ ಕುಂದರ್ ನಿರ್ವಹಿಸುತ್ತಿದ್ದರು. ವಿಮಾನವು ಅಹಮದಾಬಾದ್ ರನ್ವೇ 23 ರಿಂದ ಮಧ್ಯಾಹ್ನ 1:39 ಕ್ಕೆ ಹೊರಟಿತ್ತು. ಕೆಲವೇ ನಿಮಿಷಗಳಲ್ಲಿ ಎಟಿಸಿಗೆ ‘ಮೇಡೇ’ ಸಂದೇಶ ಬಂದಿತು.
ಪೈಲಟ್ ಸುಮಿತ್ ಸಭರ್ವಾಲ್ ಅವರು ಕೊನೆಯದಾಗಿ, ‘ಮೇಡೇ, ಮೇಡೇ, ಮೇಡೇ’ ಎಂದು ಸಂದೇಶ ಕಳುಹಿಸಿದ್ದರು. ಅಲ್ಲದೆ, ‘ಟೇಕಾಫ್ಗೆ ಸಾಕಷ್ಟು ಪ್ರೆಷರ್ ಸಿಗುತ್ತಿಲ್ಲ. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ’ ಎಂದು ಹೇಳಿದ್ದರು.
ಆದರೆ ನಂತರ ವಿಮಾನವು ಎಟಿಸಿ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಏರ್ಪೋರ್ಟ್ ಪರಿಧಿಯ ಹೊರಗೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿತು. ಅಪಘಾತದ ಸ್ಥಳದಿಂದ ಭಾರೀ ಕಪ್ಪು ಹೊಗೆ ಬರುತ್ತಿರುವುದು ಕಂಡುಬಂದಿತು. ಪೈಲಟ್ ಅವರ ಕೊನೆಯ ಮಾತುಗಳ ನಂತರ ವಿಮಾನ ಅಪಘಾತಕ್ಕೀಡಾಯಿತು.