ಬೆಂಗಳೂರು:- ಪ್ಲೀಸ್ ಲವ್ ಮಿ ಎಂದು ಯುವತಿ ಹಿಂದೆ ಬೆನ್ನು ಬಿದ್ದು, ಆಕೆ ಒಪ್ಪದಿದ್ದಾಗ ಹಲ್ಲೆ ಮಾಡಿರುವ ಕಾಮುಕ ಟೆಕ್ಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶ್ರೀಕಾಂತ್ ಬಂಧಿತ ಆರೋಪಿ.ಶ್ರೀಕಾಂತ್ಗೆ ಈ ಹಿಂದೆ ಮದುವೆಯಾಗಿದ್ದು, ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಕಾಲೇಜು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು
ಈ ಬಗ್ಗೆ ಯುವತಿಯು ಆತನ ಪತ್ನಿಗೆ ದೂರು ನೀಡಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಯುವತಿಯು ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಟೆಕ್ಕಿಯು ಕೋಪಗೊಂಡಿದ್ದ
ಕಳೆದ 3 ದಿನಗಳ ಹಿಂದೆ ಯುವತಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೇರೊಬ್ಬ ಯುವಕನೊಂದಿಗೆ ನಿಂತಿದ್ದಳು. ಇದನ್ನೂ ಟೆಕ್ಕಿ ಗಮನಿಸಿದ್ದ. ಬೇರೊಬ್ಬ ಯುವಕನೊಂದಿಗೆ ಪ್ರೀತಿ ಇರುವುದಕ್ಕೆ ನಿರಾಕರಿಸುತ್ತಿದ್ದೀಯಾ ಎಂದು ಟೆಕ್ಕಿಯು ಯುವಕ ಯುವತಿಗೆ ಚಾಕು ಹಾಕಿದ್ದ.
ನೊಂದ ಯುವತಿಯು ಟೆಕ್ಕಿಯ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಅನ್ವಯ ಅರೆಸ್ಟ್ ಮಾಡಲಾಗಿದೆ.