ಶ್ರೀಲಂಕಾ ಪ್ರವಾಸದ ಕೊನೆಯ ದಿನವಾದ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು, ಅನುರಾಧಪುರಕ್ಕೆ ಭೇಟಿ ನೀಡಿದ್ದರು. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರೊಂದಿಗೆ ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ತೆರಳಿದ್ದರು.
87ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿ, ಟೀಕೆ ಟಿಪ್ಪಣಿ ಚರ್ಚೆ ಅನವಶ್ಯಕ ; ಸಚಿವ ಎನ್.ಚಲುವರಾಯಸ್ವಾಮಿ
ಇದಾದ ನಂತರ, ಪ್ರಧಾನಿ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಜಂಟಿಯಾಗಿ ಮಹೋ-ಅನುರಾಧಪುರ ರೈಲು ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಇದು ಭಾರತ ಸರ್ಕಾರದ ಸಹಾಯದಿಂದ ಪೂರ್ಣಗೊಂಡ ಯೋಜನೆಯಾಗಿದೆ. ಪ್ರಧಾನಿ ಮೋದಿ ಅವರು ಮಹೋ-ಒಮಂಥೈ ರೈಲು ಮಾರ್ಗ ಉದ್ಘಾಟಿಸಿದರು. ಇಲ್ಲಿಂದ ಅವರು ರೈಲಿಗೆ ಹಸಿರು ನಿಶಾನೆ ತೋರಿದರು.
ಶ್ರೀಲಂಕಾ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಶ್ರೀಲಂಕಾ ಮಿತ್ರ ವಿಭೂಷಣ ಸಮ್ಮಾನ್’ ನೀಡಿ ಗೌರವಿಸಲಾಗಿದೆ. ಭಾರತವು ಐತಿಹಾಸಿಕವಾಗಿ ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಶ್ರೀಲಂಕಾಕ್ಕೆ ಸಹಾಯಹಸ್ತ ಚಾಚಿದ ಮೊದಲ ದೇಶ ಭಾರತವಾಗಿತ್ತು.