ಅಪ್ರಾಪ್ತ ಬಾಲಕಿಯರನ್ನೆ ಟಾರ್ಗೆಟ್ ಮಾಡಿ ಅತ್ಯಾಚಾರ ಮಾಡುತ್ತಿದ್ದ ಕಾಮುಕ ಉದ್ಯಮಿ ಬಳ್ಳಾರಿ ಮೂಲದ ಕಿರಣ್ ಜೈನ್ ಎಂಬ ಪಾಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಫೋಕ್ಸೋ ಕೇಸಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳಸಿದ್ದಾರೆ.
ಇತ್ತಿಚಿಗೆ ಸಿಸಿಬಿ ಪೊಲೀಸ್ರು ನಗರದಾದ್ಯಂತ ವೇಶ್ಯವಾಟಿಕೆ ನಡೆಸಿತ್ತದ್ದ ಸ್ಥಳಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ್ರು. ಈ ಕಾರ್ಯಾಚರಣೆಯಲ್ಲ ಎಂಟು ಜನ ಪಿಂಪ್ ಗಳನ್ನ ಬಂಧಿಸಿದ್ರು. ಆಗ ತನಿಖೆಯಲ್ಲಿ ಸಿಸಿಬಿ ಪೊಲೀಸರಿಗೆ ಒಂದು ಶಾಕಿಂಗ್ ವಿಚಾರ ಗೊತ್ತಾಗಿತ್ತು. ಬಳ್ಳಾರಿ ಮೂಲದ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಕಿರಣ್ ಜೈನ್ ಪಿಂಪಗಳ ಮುಖಾಂತರ ಅಪ್ರಾಪ್ತ ಬಾಲಕಿಯರನ್ನ ಲಾಡ್ಜ್, ಹೊಟೆಲ್ ಗಳಿಗೆ ಕರೆಸಿಕೊಂಡು ವತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನಂತೆ. ಅನೆಕ ಬಾಲಕಿಯರಿಗೆ ಉದ್ಯೋಗ, ಹಣ, ಸಿನಿಮಾ, ಸಿರಿಯಲ್ ಗಳಲ್ಲಿ ಕೆಲಸದ ಆಸೆ ತೋರಿಸಿದ್ದಾನಂತೆ. ಬಾಲಕಿಯರು ಒಪ್ಪದೆ ಇದ್ದಾಗ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವು ಕೇಳಿ ಬರುತ್ತಿದೆ.
ದುಡ್ಡು ಎಷ್ಟಾದ್ರು ಪರವಾಗಿಲ್ಲ ಸಣ್ಣ ವಯಸ್ಸಿನ ಹುಡಿಗಿರೇ ಬೇಕು
ದುಡ್ಡು ಜಾಸ್ತಿ ಆದ್ರೂ ಪರವಾಗಿಲ್ಲ ಆದ್ರೆ ಸಣ್ಣ ವಯಸ್ಸನಿ ಹುಡಿಗಿಯರು ಬೇಕು ಅಂತ ಕಿರಣ್ ಜೈನ್ ಪಿಂಪ್ ಗಳಿಗೆ ಬೇಡಿಕೆ ಇಡ್ತಿದ್ನಂತೆ. ಕಿರಣ್ ಬೇಡಿಕೆಯಂತೆ ಪಿಂಪ್ ಗಳು ಅಪ್ರಾಪ್ತೆಯರನ್ನ ಕರೆತಂದು ಇವನ ಜೊತೆ ಬಿಡ್ತಿದ್ದರು ಅನ್ನೊ ಮಾಹಿತೆ ಇದೆ.
ಅಪ್ರಾಪ್ತೆಯರಿಗೆ ಹೊಟೆಲ್ ರೂಮ್ ನಲ್ಲಿ ಪ್ರವೇಶವಿಲ್ಲದ ಕಾರಣ ವಯಸ್ಸಿನ ನಕಲಿ ID ಕಾರ್ಡ್ ತಯಾರಿ
ಐಶಾರಾಮಿ ಹೋಟೆಲ್ ಗಳಲ್ಲಿ ರೂಮ್ ಬುಕ್ ಮಾಡ್ತಿದ್ದ ಕಿರಣ್ ಜೈನ್ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ರೂಮ್ ನಲ್ಲಿ ಪ್ರವೇಶ ಕೊಡೊದಿಲ್ಲ. ಕಾರಣಕ್ಕಾಗಿ ಬಾಲಕಿಯರ ವಯಸ್ಸು ಹೆಚ್ಚಾಗಿರೋ ರೀತಿ ನಕಲಿ ಆಧಾರ್ ಕಾರ್ಡ್ ನೀಡಿ ಅಪ್ರಾಪ್ತ ಹೆಣ್ಣುಮಕ್ಕಳನ್ನ ರೂಮ್ ಗೆ ಕರೆದೋಕೊಂಡು ಹೊಗುತ್ತಿದ್ದ. ಸದ್ಯ ಈ ವಿಚಾರಗಳು ತನಿಖೆಯಲ್ಲಿ ಬಹಿರಂಗವಾಗಿದ್ದು, ಪೋಕ್ಸೊ ಪ್ರಕರಣದಡಿ ಕಿರಣ್ ರಾಜ್ ನನ್ನ ಸಿಸಿಬಿ ಪೊಲೀಸ್ರು ಬಂಧಿಸಿ ಜೈಲಿಗೆ ಕಳಸಿದ್ದಾರೆ.