ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಹುಬ್ಬಳ್ಳಿಯಲ್ಲಿ ಅಲೆದಾಡುತ್ತ, ಸಾರ್ವಜನಿಕರಿಗೆ ಕಲ್ಲು ತೂರುತ್ತ, ಅವಾಚ್ಛವಾಗಿ ನಿಂದಿಸುತ್ತ ತೊಂದರೆ ಕೊಡುತ್ತಿರುವುದನ್ನು ಕಂಡ ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಮ್ ಎಸ್ ಹೂಗಾರ ಅವರು ನ್ಯಾಯಾಧೀಶರ ಆದೇಶದ ಮೇರೆಗೆ ಮಾನಸಿಕ ಆಸ್ಪತ್ರೆಗೆ ರವಾನೆ ಮಾಡಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ನಿಮಗೆ ಅನಾರೋಗ್ಯ ಕಾಡುತ್ತೆ..! ಇದನ್ನು ನೀವೂ ನಂಬಲೆಬೇಕು
ಕಳೆದ 2 ತಿಂಗಳಿಂದ ಒಂದೇ ಕಡೆ ವಾಸವಿದ್ದ ಮಾನಸಿಕ ಅಸ್ವಸ್ಥ ಮಹಿಳೆ, ಹುಬ್ಬಳ್ಳಿಯ ಶಾರದಾ ವೃತ್ತದ ಬಳಿ ರಸ್ತೆ ಪಕ್ಕ ವಾಸವಾಗಿದ್ದ ಈ ಮಹಿಳೆ ಸಾರ್ವಜನಿಕರ ಮೇಲೆ ಕಲ್ಲು ತೂರುತ್ತಿದ್ದಳು, ಬೈದಾಡುತ್ತಿದಳು, ಈ ಕಾರಣ ಸಾರ್ವಜನಿಕರಿಂದ ಮಹಿಳೆಗೆ ತೊಂದರೆ ಆಗುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಂಡ ಉಪನಗರ ಪೊಲೀಸರು,
ಮಹಿಳೆಯ ಬಗ್ಗೆ ಮಾಹಿತಿ ಸಹ ದೊರಕದ ಹಿನ್ನಲೆ, 112 ವಾಹನದ ಮೂಲಕ ಪೊಲೀಸ್ ಸಿಬ್ಬಂದಿ ನ್ಯಾಯಾಧೀಶರ ಎದುರು ಕರೆದೋಯ್ದು ಅವಳ ಸ್ಥಿತಿ ನೋಡಿದ ನ್ಯಾಯಾಧೀಶರು ಅವರ ಅನುಮತಿ ಮೇರೆಗೆ ಧಾರವಾಡದ ಡಿಮ್ಹಾನ್ಸ್ ಗೆ ರವಾನೆ ಮಾಡಿದರು.ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೋಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಸಂಶೆ ವ್ಯಕ್ತವಾಗಿದೆ.