ಬೀದರ್ : ಬೀದರ್ ನಲ್ಲಿ ಗನ್ ತೋರಿಸಿ ಮನೆ ದರೋಡೆ ಹಾಗೂ ಕಲಬುರಗಿಯಲ್ಲಿ ಎಟಿಎಂ ದರೋಡೆ ಖಾಕಿ ಮೇಲೆ ಫೈರಿಂಗ್ ವಿಚಾರ ಬೀದರ ನಲ್ಲಿ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದರು.
ಬೀದರ್ ಹಾಗೂ ಕಲಬುರಗಿಯಲ್ಲಿ ದರೋಡೆ ಆಗಿದೆ. ಇದಕ್ಕೆ ಪೋಲಿಸರು ಹೆಚ್ಚಿನ ರೀತಿಯಲ್ಲಿ ಶ್ರಮ ಮಾಡಿ ಕಲಬುರಗಿಯಲ್ಲಿ ಆರೋಪಿಗಳಿಗೆ ಪೊಲೀಸರು ಬಂಧಿಸಿದ್ದಾರೆ.
ಬೀದರ ನಲ್ಲಿ ದೊಡ್ಡ ದರೋಡೆ ಆಗಿದ್ದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದು ಅತ್ಯಂತ ಗಂಬೀರ ಪ್ರಕರಣವಾಗಿದೆ. ಪೋಲಿಸ್ ಇಲಾಖೆ ಈ ದರೋಡೆಕೋರರು ಯಾರೆ ಇರಲಿ ಏಲ್ಲೆ ಇರಲಿ ಅವರನ್ನು ಬಂಧಿಸಿ ದರೋಡೆಕೋರರ ಬಂಧಿಸಬೇಕು. ದರೋಡೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕೆಲಸ ಮಾಡಬೇಕು ಎಂದರು.