ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಬೆಳ್ಳಂಬೆಳಗ್ಗೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಹಳೆ ಹುಬ್ಬಳ್ಳಿ ಪೊಲೀಸರಿಂದ ರೌಡಿಶೀಟರ್ ಮಲಿಕ್ ತಾಜುದ್ದೀನ್ ಆದೋನಿ ಮೇಲೆ ಫೈರಿಂಗ್ ನಡೆದಿದೆ. ಮಲ್ಲಿಕ್ ತಾಜುವುದ್ದಿನ್ ಆದೋನಿ ಅಟೋ ಚಾಲಕನಾಗಿದ್ದ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಗಳ ನಡುವೆ ಗಲಾಟೆ ನಡೆದಿತ್ತು. ಇದೇ ಪ್ರಕರಣ ಸಂಬಂಧ ಆರೋಪಿಗಳ ಬಂಧಿಸಲು ತೆರಳಲು ಹೋಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ರೌಡಿಶೀಟರ್ ಮೇಲ ಫೈರಿಂಗ್ ನಡೆಸಿದ್ದಾರೆ.
ಮಹಾಲಿಂಗಪುರ ಪಟ್ಟಣದಲ್ಲಿ ಜೆಸಿಬಿ ಘರ್ಜನೆ ; 30 ಕುಟುಂಬಗಳು ವಾಸವಿದ್ದ ಶೆಡ್‌ಗಳ ತೆರವು
ಇನ್ನೂ ಹಳೆ ಹುಬ್ಬಳ್ಳಿ ಪಿಎಸ್ ಐ ವಿಶ್ವನಾಥ ಆಲದಮಟ್ಟಿ ,ಸಿಪಿಸಿ ಶರೀಫ ನದಾಫ್ ಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.