Close Menu
Ain Live News
    Facebook X (Twitter) Instagram YouTube
    Sunday, June 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Hubli: ಸಿಬ್ಬಂದಿ ಹುದ್ದೆಗಳ ಸಂದರ್ಶನ ಮುಂದೂಡಿಕೆ: ಆಕ್ರೋಶ

    By AIN AuthorNovember 22, 2023
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ವಿವಿಧ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಯ ಸಂದರ್ಶನಕ್ಕೆ ನಗರದ ಚಿಟಗುಪ್ಪಿ ಆಸ್ಪತ್ರೆಗೆ ಬಂದ ಅಭ್ಯರ್ಥಿಗಳಿಗೆ ನಿರಾಸೆ ಕಾದಿತ್ತು. ಬುಧವಾರ ನಡೆಯಬೇಕಿದ್ದ ಸಂದರ್ಶನ ನ. 27, 28ಕ್ಕೆ ಮು‌ದೂಡಿದ್ದು ಅವರ ಆಕ್ರೋಶಕ್ಕೆ ಕಾರಣವಾಯಿತು.

    ಪ್ರಸೂತಿ ಹಾಗೂ ಸ್ತ್ರೀರೋಗ ವೈದ್ಯರು, ಎಂಬಿಬಿಎಸ್ ವೈದ್ಯರು, ಸಾಮಾನ್ಯ ವೈದ್ಯರು, ಅರವಳಿಕೆ ತಜ್ಞರು, ಅರೆ ವೈದ್ಯಕೀಯ ಸಿಬ್ಬಂದಿ, ಎಲ್.ಡಿ.ಸಿ., ಡೇಸ್ಟರ್, ವಾರ್ಡ್’ಬಾಯ್, ಆಯಾ ಮತ್ತು ಆ್ಯಂಬೂಲೆನ್ಸ್ ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮಾಸಿಕ ಗೌರವಧನ ಆಧಾರದ ಮೇಲೆ 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿ, ನ. 22ರಂದು ಸಂದರ್ಶನ ನಿಗದಿಪಸಲಾಗಿತ್ತು.

    ಅರ್ಜಿ‌ ಸಲ್ಲಿಸಿದ್ದ ಮಹಾರಾಷ್ಟ್ರದ ಪುಣೆ, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಹಾವೇರಿ, ಉತ್ತರಕನ್ನಡ, ಬೆಂಗಳೂರು ಭಾಗದ 70ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಆಸ್ಪತ್ರೆ ಮುಂಭಾಗ ‘ಕಾರಣಾಂತರಗಳಿಂದ ಸಂದರ್ಶನ ಮುಂದೂಡಲಾಗಿದೆ’ ಎನ್ನುವ ನೋಟಿಸ್ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.

    ‘ಟೆಕ್ನಿಷಿಯನ್ ಹುದ್ದೆಗೆ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದೆ. ಸುತ್ತೋಲೆಯಲ್ಲಿ ತಿಳಿಸಿದಂತೆ ಇಂದು ಬೆಳಿಗ್ಗೆ 10ಕ್ಕೆ ಸಂದರ್ಶನವಿತ್ತು. ಆದರೆ, ಮುಂದೂಡಲಾಗಿದೆ ಎಂದು ನೋಟಿಸ್ ಅಂಟಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅನೇಕರು ಸಂದರ್ಶನಕ್ಕೆ ಬಂದಿದ್ದಾರೆ. ಸಂದರ್ಶನ ಮುಂದೂಡಿರುವ ವಿಷಯ ಒಂದು ದಿನ ಮುಂಚಿತವಾಗಿಯಾದರೂ ಮಾಧ್ಯಮದಲ್ಲಿ ತಿಳಿಸಬೇಕಿತ್ತು’ ಎಂದು ಪುಣೆಯಿಂದ ಬಂದಿದ್ದ ಮಂಜುನಾಥ ಎಂ. ಬೇಸರ ವ್ಯಕ್ತಪಡಿಸಿದರು.

    ‘ಮನೆಯಲ್ಲಿ‌ ನಾಲ್ಕು ತಿಂಗಳ ಮಗುವನ್ನು ಬಿಟ್ಟು ಸಂದರ್ಶನಕ್ಕೆ ಬಂದಿದ್ದೆ. ಇಲ್ಲಿ ಸಿಬ್ಬಂದಿಯನ್ನು ಕೇಳಿದರೆ ನೋಟಿಸ್ ನೋಡಿ, ನಮಗೇನೂ ಗೊತ್ತಿಲ್ಲ ಎಂದು ದರ್ಪದಿಂದ ಮಾತನಾಡುತ್ತಾರೆ. ಉದ್ಯೋಗ ಸಿಗಬಹುದೆಂದು ಕಷ್ಟಪಟ್ಟು, ನೂರಾರು ಕಿ.ಮೀ. ದೂರದಿಂದ ಬಂದಿರುತ್ತೇವೆ. ಹೀಗೆ ಏಕಾಏಕಿ ಮುಂದೂಡಿದರ ನಾವೇನು ಮಾಡಬೇಕು’ ಎಂದು ಬೆಂಗಳೂರಿನಿಂದ ಬಂದ ಚೈತ್ರಾ ಪ್ರಶ್ನಿಸಿದರು.

    ‘ಸಂದರ್ಶನದ ಜಾಹೀರಾತಿನಲ್ಲಿ ಯಾವ ಹುದ್ದೆಗೆ ಎಷ್ಟು ಸೀಟು, ವೇತನ ಎಷ್ಟು ಎನ್ನುವ ಯಾವ ಮಾಹಿತಿಯೂ ಇಲ್ಲ. ಮೆರಿಟ್ ಅಥವಾ ಅನುಭವದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆಯೋ ಎನ್ನುವುದೂ ಗೊತ್ತಿಲ್ಲ. ಇದರಲ್ಲಿ ಗೊಂದಲವಿದ್ದು, ಪಾರದರ್ಶಕ ಆಯ್ಕೆ ನಡೆಯುವ ಅನುಮಾನವಿದೆ. ಅದಕ್ಕಾಗಿ ಸಂದರ್ಶನ ಮುಂದೂಡಿದ್ದಾರೆ’ ಎಂದು ರಾಯಚೂರಿನಿಂದ ಬಂದಿದ್ದ ಸ್ಮೀತಾ ಎಂ.ಎಸ್. ತಿಳಿಸಿರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಖ್ಯವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ಅವರು, ಅಭ್ಯರ್ಥಿಗಳ ಜೊತೆ ಚರ್ಚಿಸಿ, ಸಮಾಧಾನಪಡಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ’50 ಹುದ್ದೆಗಳಿಗರ 200ರಷ್ಟು ಅರ್ಜಿ ಬರಬಹುದೆಂದು ನಿರೀಕ್ಷೆ ಮಾಡಲಾಗಿತ್ತು.‌ ಆದರೆ, ಒಂದು ಸಾವಿರದಷ್ಟು ಅರ್ಜಿಗಳು ಸ್ವೀಕೃತವಾಗಿದೆ. ನಿರೀಕ್ಷೆ ಮೀರಿ ಅರ್ಜಿ ಬಂದಿದ್ದರಿಂದ ಸಂದರ್ಶನ ಮುಂದೂಡಲಾಗಿದೆ. ಅರ್ಜಿಗಳನ್ನೆಲ್ಲ ಪರಿಶೀಲಿಸಿ, ಅರ್ಹ 200ರಷ್ಟು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನ ಮುಂದೂಡಿರುವ ವಿಷಯ ಒಂದುದಿನ ಮುಂಚಿತವಾಗಿಯಾದರೂ ನಾವು ತಿಳಿಸಬೇಕಿತ್ತು. ಇದರಿಂದಾಗಿ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ’ ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವುದು ಸೂಕ್ತ: ಡಾ, ಸಂತೋಷ್ ಒಂಟಿ!

    June 8, 2025

    ಮಂಟಪದಲ್ಲೇ ಗಂಡನಿಗೆ ಚಪ್ಪಲಿ ಪೂಜೆ: ಸೈಲೆಂಟಾಗಿ 2ನೇ ಮದುವೆ ಆಗ್ತಿದ್ದವ ಹೆಂಡ್ತಿ ಕೈಗೆ ಸಿಕ್ಕಿಬಿದ್ದ!

    June 8, 2025

    ಬಸ್ ರಷ್ ಇದ್ರೂ ಬಸ್ ಹತ್ತೋ ಮಹಿಳೆಯರೇ ಈ ಸುದ್ದಿ ನೋಡಲೇಬೇಕು! ಇಂಥವರು ಇದ್ದಾರೆ ಹುಷಾರ್!

    June 8, 2025

    ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಬೇಕು: ಬಸವರಾಜ ಹೊರಟ್ಟಿ!

    June 7, 2025

    ಚಿನ್ನಸ್ವಾಮಿ ದುರಂತ: ಸಿದ್ದರಾಮಯ್ಯ ಸೇರಿ ನಮಗೆಲ್ಲಾ ತುಂಬಾ ನೋವಾಗಿದೆ- ಎಂ.ಸಿ ಸುಧಾಕರ್!

    June 7, 2025

    ಕೌಟುಂಬಿಕ ಜಗಳ: ಚಿಕ್ಕಪ್ಪನಿಂದಲೇ ಅಣ್ಣನ ಮಗನ ಬರ್ಬರ ಹತ್ಯೆ!

    June 7, 2025

    ಸವದತ್ತಿಯಲ್ಲಿ ಮಳೆ ಆರ್ಭಟ: ನದಿಯಂತಾದ ರಸ್ತೆಗಳು.. ಜನಜೀವನ ಅಸ್ತವ್ಯಸ್ತ!

    June 7, 2025

    Mandya: ಕಳ್ಳತನಕ್ಕೆ ಯತ್ನಿಸಿ ಕೊನೆ ಕ್ಷಣದಲ್ಲಿ ಕೈಮುಗಿದು ತೆರಳಿದ ಮುಸುಕುಧಾರಿ!

    June 7, 2025

    ಸಬ್ ಇನ್ಸ್ ಪೆಕ್ಟರ್ ಸಮಯಪ್ರಜ್ಞೆ: ಬೆಂಕಿ ಅನಾಹುತದಿಂದ ಪಾರಾದ ರೈತ ಕುಟುಂಬ!

    June 7, 2025

    ಚಾಮರಾಜನಗರ: ಜಿಲ್ಲೆಯಾದ್ಯಂತ ಸಡಗರ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

    June 7, 2025

    ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಕಾರು ಪಲ್ಟಿ: ಇಬ್ಬರಿಗೆ ಗಾಯ

    June 7, 2025

    ತುಂಬು ಗರ್ಭೀಣಿ ಅನುಮಾನಾಸ್ಪದ ಸಾವು: ಮಂಡ್ಯದ ಮದ್ದೂರಿನಲ್ಲಿ ಹೃದಯ ವಿದ್ರಾವಕ ಘಟನೆ

    June 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.