ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಂಡಿಯನ್‌ಪ್ರೀಮಿಯರ್ ಲೀಗ್-ಐಪಿಎಲ್ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಭದ್ರತಾ ಕಾಳಜಿ ದೃಷ್ಟಿಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ ನಿರ್ಧಾರ ಪ್ರಕಟಿಸಿದೆ.
ಎಲ್ಲಾ ವಿದೇಶಿ ಆಟಗಾರರು ಅವರ ತಾಯ್ನಾಡಿಗೆ ಕಳುಹಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ನಿನ್ನೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ. ಇಂದು ಆರ್‌ಸಿಬಿ ವರ್ಸಸ್ ಲಕ್ನೋ ನಡುವೆ ಪಂದ್ಯ ನಡೆಯಬೇಕಿತ್ತು.
ಐಪಿಎಲ್ ವಿಶ್ವದಲ್ಲೇ ಅತ್ಯಂತ ದೊಡ್ಡ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಆಗಿದೆ. ಈ ಬಾರಿ 18ನೇ ಸೀಸನ್ ಮುಗಿಯುವ ಹಂತದಲ್ಲೇ ಟೂರ್ನಿ ರದ್ದಾಗಿ ತಾತ್ಕಾಲಿಕವಾಗು ಸ್ಥಗಿತಗೊಳಿಸಿದೆ. ಭಾರತೀಯ ನಾಗರಿಕರನ್ನು ಟಾರ್ಗೆಟ್ ಮಾಡಿ ಪಾಪಿ ಪಾಕಿಸ್ತಾನ ತನ್ನ ನರಿಬುದ್ದಿ ತೋರಿಸಲಿದೆ. ಹೀಗಾಗಿ ಎಲ್ಲರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್‌ನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಐಪಿಎಲ್ ಅನ್ನು ನಿಲ್ಲಿಸಲಾಗಿದ್ದು, ಬಿಸಿಸಿಐ ಖಂಡಿತವಾಗಿಯೂ ಸಾವಿರಾರು ಕೋಟಿ ನಷ್ಟವನ್ನು ಅನುಭವಿಸುತ್ತದೆ. ಬಿಸಿಸಿಐ ಹಣವನ್ನು ಮರುಪಾವತಿಸುವ ಸಾಧ್ಯತೆಯಿದೆ, ವಿಶೇಷವಾಗಿ ಬ್ರಾಂಡ್ ಪ್ರಚಾರ ಮತ್ತು ಪ್ರಸಾರ ಕಂಪನಿಗಳಿಗೆ. ಅವರು ಇಡೀ ಋತುವಿಗೆ ಬಿಸಿಸಿಐಗೆ ಹಣ ಪಾವತಿಸಿರಬೇಕು. ಈಗ, ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸಿದರೆ, ಅವರು ಖಂಡಿತವಾಗಿಯೂ ಬಿಸಿಸಿಐನಿಂದ ಮರುಪಾವತಿ ಕೇಳುತ್ತಾರೆ.
ಆಯಾ ಫ್ರಾಂಚೈಸಿಗಳು ಈ ವಿಷಯವನ್ನು ಆಟಗಾರರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಪ್ರತಿಯೊಬ್ಬ ಆಟಗಾರನಿಗೆ ಎಷ್ಟು ಸಂಭಾವನೆ ನೀಡಬೇಕು, ಮತ್ತು ಎಷ್ಟು ಪಂದ್ಯಗಳು ಪೂರ್ಣಗೊಂಡಿವೆ. ಎಷ್ಟು ಉಳಿದಿವೆ? ಇದೆಲ್ಲವನ್ನೂ ಲೆಕ್ಕ ಹಾಕಿದ ನಂತರ, ಆಯಾ ಫ್ರಾಂಚೈಸಿಗಳು ಆಟಗಾರರಿಗೆ ಶುಲ್ಕವನ್ನು ಪಾವತಿಸುತ್ತವೆ. ಆದರೆ, ಹರಾಜಿನಲ್ಲಿ ಉಲ್ಲೇಖಿಸಿದ ಪೂರ್ಣ ಬೆಲೆಯನ್ನು ಪಾವತಿಸಬೇಕು ಎಂಬ ನಿಯಮ ಒಪ್ಪಂದದಲ್ಲಿ ಇಲ್ಲ ಎಂದು ವರದಿಯಾಗಿದೆ. ಈ ವಿಷಯದ ಬಗ್ಗೆ ಬಿಸಿಸಿಐನಿಂದಲೂ ಸ್ಪಷ್ಟತೆ ಇಲ್ಲ. ಹಿಂದೆ ಐಪಿಎಲ್ ಎಂದಿಗೂ ರದ್ದಾಗಿಲ್ಲದ ಕಾರಣ ಈ ಸಮಸ್ಯೆ ಉದ್ಭವಿಸಲಿಲ್ಲ