ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ, ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿ, ಮಳೆಗೆ ಹೊಲದಲ್ಲಿದ್ದ ವಿದ್ಯುತ್ ವೈರ್ ಕಟ್ ಆಗಿ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸಿದ್ದಪ್ಪ ಜುಲಪಿ ಎಂಬುವರ ಹೊಲದಲ್ಲಿ ವಿದ್ಯುತ್ ತಂತಿ ಮುರಿದುಬಿದ್ದಿದೆ. ಕಟ್ ಆಗಿ ಬಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಆತಂಕ ಮೂಡಿಸಿದೆ.
ಬಿರುಗಾಳಿಯ ಆರ್ಭಟ, ತುಂಡಾಗಿ ಬಿದ್ದ ವಿದ್ಯುತ್ ತಂತಿ ; ಇಬ್ಬರಿಗೆ ಗಾಯ, ಎಲೆಕ್ಟ್ರಾನ್ ವಸ್ತುಗಳು ಬೆಂಕಿಗಾಹುತಿ
ವೈರ್ ಕಟ್ ಆಗಿ ಬಿದ್ದರೂ ಸಹ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಈ ಕುರಿತಂತೆ ಹೆಸ್ಕಾಂ ಸಿಬ್ಬಂದಿಗಳಿಗೆ ಫೋನ್ ಮಾಡಿ ಹೇಳಿದರೂ ಯಾರು ಕೇರ್ ಮಾಡುತ್ತಿಲ್ಲ. ವಿದ್ಯುತ್ ತಂತಿ ಕಟ್ ಆಗಿರೋ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಭಯದಲ್ಲೇ ಕೆಲಸ ಮಾಡುವಂತಾಗಿದೆ.