ಧಾರವಾಡ : ದುಮ್ಮವಾಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಏ.13 ರಿಂದ ಏ.15ರವರೆಗೂ ಬೆಳಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 02-00 ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಲಘಟಗಿ ಉಪವಿಭಾಗ ವ್ಯಾಪಿಯಲ್ಲಿ ಬರುವ ದುಮ್ಮವಾಡ 33/11 ಕೆ.ವಿ ದುಮ್ಮವಾಡ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸದ ಸಲುವಾಗಿ ದಿ:13.04.2025 ರಿಂದ 15.04.2025 ರಂದು ಬೆಳಗ್ಗೆ 10.00 ಘಂಟೆಯಿಂದ ಮದ್ಯಾಹ್ನ 02-00 ಘಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಸಿಲಾಗಿದೆ.
ಹೀಗಾಗಿ ಈ ವ್ಯಾಪ್ತಿಯಲ್ಲಿ ರುವ ದುಮ್ಮವಾಡ ಕಣವಿಹೊನ್ನಾಪುರ್ ಪಂಪಹೌಸ್ನ, ಜಮ್ಮಿಹಾಳ, ಜಿ ಬಸನಕೊಪ್ಪ, ಜೊಡಳ್ಳಿ, ನಿರಸಾಗರ, ಕಳಸನಕೊಪ್ಪ, ಗಂಬ್ಯಾಪ್ಟರ್, ಲಿಂಗನಕೊಪ್ಪ, ಯಮ್ಮಿಕೇರಿ,ಜಿ ಹುಲಕೊಪ್ಪ, ಮುತ್ತಗಿ, ಆರೇಬಸವನಕೊಪ್ಪ ಮತ್ತು ಹಸರಂಬಿ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕಲಘಟಗಿ ಉಪವಿಭಾಗದ ಅಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.