ಟಾಲಿವುಡ್ ಮೋಸ್ಟ್ ಬ್ಯಾಚುರಲ್ ಸ್ಟಾರ್ ಯಾರು ಅಂದ್ರೆ ಎಲ್ಲರು ಬೊಟ್ಟು ಮಾಡೋದೇ ಡಾರ್ಲಿಂಗ್ ಕಡೆ. ವಯಸ್ಸು 40 ಕಳೆದ್ರೂ ಮಿಂಗಲ್ ಆಗದೇ ಸಿಂಗಲ್ ಆಗಿಯೇ ಉಳಿದಿರುವ ಪ್ರಭಾಸ್ ಮದುವೆ ಬಗ್ಗೆ ಅಭಿಮಾನಿಗಳಿಗೂ ಹಾಗೂ ಚಿತ್ರರಂಗದವರಿಗೆ ಕುತೂಹಲ ಇದ್ದೇ ಇದೆ. ಪ್ರಭಾಸ್ ಕೈ ಹಿಡಿಯುವ ಹುಡ್ಗಿ ಯಾರು? ಡಾರ್ಲಿಂಗ್ ಮನದರಸಿ ಆಗುವ ಸುಯೋಗ ಅದ್ಯಾವ ಹುಡ್ಗಿಗೆ ಇದೆಯೋ ಗೊತ್ತಿಲ್ಲ. ಆದ್ರೆ ಬಾಹುಬಲಿ ಸ್ಟಾರ್ ಈ ವರ್ಷವೇ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಹೈದ್ರಾಬಾದ್ ಗಲ್ಲಿ ಗಲ್ಲಿಯಲ್ಲಿಯೂ ಹರಿದಾಡ್ತಿದೆ.
ಪ್ರಭಾಸ್ ಮದುವೆ ವಿಷಯ ಮುನ್ನೆಲೆಗೆ ಬಂದ ತಕ್ಷಣ ಆ ನಟಿಯ ಹೆಸರು ಕೇಳಿ ಬಂದೇ ಬರುತ್ತದೆ. ಬಾಹುಬಲಿಯ ದೇವಸೇನಾಳಾಗಿ ಮಿಂಚಿದ ನಟಿ ಅನುಷ್ಕಾ ಶೆಟ್ಟಿ ಡಾರ್ಲಿಂಗ್ ನಡುವೆ ಏನೋ ಇದೆ ಅನ್ನೋದು ಬಹುತೇರ ಅನುಮಾನ. ಅನುಷ್ಕಾನೇ ನಮ್ ಅತ್ತಿಗೆ ಆಗಲಿದ್ದಾರೆ ಅನ್ನೋದು ಫ್ಯಾನ್ಸ್ ಗೂ ಇಷ್ಟ. ಆದ್ರೆ ಈ ಜೋಡಿ ನಮ್ಮ ನಡುವೆ ಏನೂ ಇಲ್ಲ. ವಿ ಆರ್ ಜಸ್ಟ್ ಫ್ರೆಂಡ್ ಅಂತಾ ಹೇಳುತ್ತಾನೆ ಬಂದಿದ್ದಾರೆ. ಆದರೂ ಈ ಜೋಡಿ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಲೇ ಇರುತ್ತದೆ.
ಪ್ರಭಾಸ್ ಮದುವೆಯಾಗುತ್ತಿರುವುದು ಅನುಷ್ಕಾ ಅವರ ಜೊತೆಯಲ್ಲ. ಹೈದರಾಬಾದ್‌ನ ದೊಡ್ಡ ಉದ್ಯಮಿಯ ಮಗಳು ಎಂದು ಹೇಳಲಾಗುತ್ತಿದೆ.. ಇತ್ತೀಚೆಗೆ ಶ್ಯಾಮಲಾ ದೇವಿ ಅವರು ಶ್ರೀಮಂತ ಕುಟುಂಬದ ಹುಡುಗಿಯನ್ನು ನೋಡಿದ ನಂತರ ಪ್ರಭಾಸ್ ಮದುವೆಯ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ ಎಂಬ ಮಾಹಿತಿಯು ವೈರಲ್ ಆಗುತ್ತಿದೆ. ಸದ್ಯ ಪ್ರಭಾಸ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಶೂಟಿಂಗ್ ನಲ್ಲಿ ಯಂಗ್ ರೆಬಲ್ ಸ್ಟಾರ್ ತೊಡಗಿಸಿಕೊಂಡಿದ್ದಾರೆ.