ಈ ಸಲಾ ಕಪ್ ನಮ್ಮದೇ ಅಲ್ಲ, ನಮ್ದು ಅಂತಾ ಕಿಂಗ್ ಕೊಹ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಕುಲ ಕೋಟಿ ಕನ್ನಡಿಗರ 18 ವರ್ಷದ ಕನಸು ನನಸಾಗಿದೆ. ಆರ್ ಸಿಬಿ, ಆರ್ ಸಿಬಿ ಎಂಬ ಘೋಷವಾಕ್ಯ ಎಲ್ಲೆಲ್ಲೂ ಮೊಳಗುತ್ತಿದೆ. ಆರ್ ಸಿಬಿ ಪಂಜಾಬ್ ವಿರುದ್ಧ ವಿರೋಚಿತ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಜಕೀಯ ನಾಯಕರಿಂದ ಹಿಡಿದು ಸಿನಿಮಾತಾರೆಯರು ಕೂಡ ಆರ್ ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಕೂಡ ಆರ್ ಸಿಬಿ ಗೆಲುವನ್ನು ಭರ್ಜರಿಯಾಗಿ ಸಂಭ್ರಮಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ ಸಬಿ ಗೆಲುವಿನ ಸಂಭ್ರಮವನ್ನು ಕೆಜಿಎಫ್ ಡೈರೆಕ್ಟರ್ ಸಂಭ್ರಮಿಸಿದ ರೀತಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
View this post on Instagram