ಹುಬ್ಬಳ್ಳಿ: ಕೋವಿಡ್ ಅಬ್ಬರ ಜನತೆಯನ್ನು ತಬ್ಬಿಬ್ಬಾಗುವಂತೆ ಮಾಡಿತು. ಮಹಾಮಾರಿಯಿಂದ ಮನೆಗಳ ಬಾಗಿಲು ಹಾಕಿದ್ದು, ಮಾತ್ರವಲ್ಲದೇ ಅದೆಷ್ಟೋ ಜನರ ಬದುಕಿನ ಬಾಗಿಲು ಕೂಡ ಹಾಕುವಂತೆ ಮಾಡಿತ್ತು. ಈಗ ಮತ್ತೇ ರಾಜ್ಯದಲ್ಲಿ ಕೊರೋನಾ ರಣಕೇಕೆ ಆರಂಭವಾಗಿದೆ. ಹಾಗಿದ್ದರೇ ಜಿಲ್ಲೆಯ ಸ್ಥಿತಿ ಏನಿದೆ ಅಂತ ನೋಡಿಕೊಂಡು ಬರೋಣ ಬನ್ನಿ..
ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ: ಮೋದಿ ವಾರ್ನಿಂಗ್!
ರಾಜ್ಯದಲ್ಲಿ ಮತ್ತೇ ಕೊರೋನಾ ರಣಕೇಕೆ ಜೋರಾಗಿದೆ. ಕೊರೋನಾ ಹಿನ್ನೆಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಕೋವಿಡ್ ಆತಂಕದ ಹಿನ್ನೆಲೆ ಪ್ರತಿಷ್ಠಿತ ಕಿಮ್ಸ್ ನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಕಿಮ್ಸ್ ಆಸ್ಪತ್ರೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದ ಏಳೆಂಟು ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ರೋಗಿಗಳ ಪರೀಕ್ಷೆಗೆ ಸಿದ್ಧತೆ ಕೂಡ ಕೆಎಂಸಿ ಆರ್ ಐ ಮಾಡಿದೆ. ಇದುವರೆಗೂ ಯಾವುದೇ ಒಂದೇ ಒಂದು ಕೇಸ್ ಕೂಡ ದೃಡಪಟ್ಟಿಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಿದೆ.
ಇನ್ನೂ ರೋಗಿಗಳ ಆರೋಗ್ಯ ವಿಚಾರದಲ್ಲಿ ಕಿಮ್ಸ್ ಆಡಳಿತ ಮಂಡಳಿ ನಿಗಾವಹಿಸಿದೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಿದ್ದು, ಧಾರವಾಡ ಜಿಲ್ಲೆ ಸೇರಿದಂತೆ ಸುತ್ತಲಿನ ಐದು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು, ನಗರದ ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಕೋವಿಡ್ ಹೆಚ್ಚುವರಿ ತಪಾಸಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆ ಕೊರೋನಾ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೋವಿಡ್ ತಪಾಸಣೆ ಹೆಚ್ಚಿಸಲು ಮುಂದಾಗಿದೆ. ಕೋವಿಡ್ ತಪಾಸಣೆಗೆ ರಾಜ್ಯದಲ್ಲಿನ 10 ಕೇಂದ್ರಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ನಗರದ ಕೆಎಂಸಿ-ಆರ್‌ಐ ಆಸ್ಪತ್ರೆಯೂ ಒಂದು. ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆ ಈ ಕೇಂದ್ರದ ವ್ಯಾಪ್ತಿಗೆ ಒಳಪಡಲಿದ್ದು, ಆರೋಗ್ಯ ಇಲಾಖೆ 10 ಸಾವಿರ ತಪಾಸಣಾ ಸಾಮಗ್ರಿಗಳನ್ನು ಹಂಚಿಕೆ ಮಾಡಿದೆ.
ಒಟ್ಟಿನಲ್ಲಿ ಕಳೆದ ಬಾರಿಯಂತೆಯೇ ಯಾವುದೇ ಸಮಸ್ಯೆ ಉಲ್ಬಣವಾಗದಂತೆ ಜಾಗೃತೆ ವಹಿಸುತ್ತಿದೆ. ಆಕ್ಷಿಜನ್, ಬೆಡ್ ವ್ಯವಸ್ಥೆ ಹಾಗೂ ವೆಂಟಿಲೇಟರ್ ಸೇರಿದಂತೆ ಅಗತ್ಯ ನಿಗಾ ವಹಿಸಿದ್ದು, ಕೊರೋನಾ ವೈರಸ್ ತಡೆಗಟ್ಟುವಂತೆ ಸಾರ್ವಜನಿಕರಿಗೂ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಕಲ್ಮೇಶ ಮಂಡ್ಯಾಳ ಹುಬ್ಬಳ್ಳಿ