ಬೆಂಗಳೂರು: ಕುಕ್ಕೆ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷನಾಗಿ ಹರೀಶ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಯಾರಿಗೂ ಶಿಫಾರಸು ಮಾಡಿಲ್ಲ. ಚುನಾವಣೆ ಮೂಲಕವೇ ಹರೀಶ್ ಇಂಜಾಡಿ ಆಯ್ಕೆ ಮಾಡಿರುವುದು.
ಇದು ಒಳ್ಳೆ ಬೆಳವಣಿಗೆ ಅಲ್ಲ. ಇದರ ಬಗ್ಗೆ ಮುಜರಾಯಿ ಇಲಾಖೆ ಸಚಿವರ ಜತೆ ಮಾತನಾಡುತ್ತೇನೆ. ರೂಲ್ಸ್ ಪ್ರಕಾರ ಹರೀಶ್ನನ್ನು ಬದಲಾವಣೆ ಮಾಡಲು ಆಗುವುದಿಲ್ಲ. 3 ವರ್ಷ ಅಧಿಕಾರಾವಧಿ ಇರುತ್ತೆ, ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು..! ತಿಳಿದ್ರೆ ಶಾಕ್ ಆಗ್ತೀರಾ..
ನಾಳೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಬಂದ ಮೇಲೆ ಹೊಸ ಕಾಯಕಲ್ಪ ಕೊಟ್ಟಿದೆ. ಅಧಿವೇಶನದಲ್ಲಿ ಕೂಡ ಚರ್ಚೆ ಆಗಿ ಶಾಸಕರ ಸಮಿತಿ ವರದಿ ಕೊಟ್ಟು,
ಸಾರ್ವಜನಿಕರ ಜೊತೆ ಚರ್ಚೆ ಆಗಿ ರಾಜ್ಯ ಪಾಲರು ಅನುಮೋದನೆ ಕೊಟ್ಟು ಮಾನ್ಯತೆ ಸಿಕ್ಕಿದೆ. ಬೆಂಗಳೂರು ವಿಶ್ವ ದರ್ಜೆ ನಗರ. ಇದರ ಬೆಳವಣಿಗೆ ಮತ್ತು ಮುಖ್ಯ ವಿಷ್ಯ ಏನಂದರೆ, ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವ ಅವಶ್ಯಕತೆ ಇದೆ ಎಂದಿದ್ದಾರೆ.