ಉದಯ ವಾಹಿನಿಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ’ಹಾಸ್ಯ ಲಾಸ್ಯ’ ಕಾಮಿಡಿ ಧಾರವಾಹಿಗಳನ್ನು ನೀಡಿ ವೀಕ್ಷಕರನ್ನು ರಂಜಿಸಿದ್ದ ಹೆಸರಾಂತ ಜೋಡಿಗಳಾದ ಡಾ.ಮುತ್ತುರಾಜ್.ಎಂ.ಎಸ್ ಮತ್ತು ಶ್ರೀಕಂಠ.ಬಿ.ಎ ಪ್ರೀತಿ ಪ್ರೇಮ ಪಂಗನಾಮ ಚಿತ್ರ ಮಾಡುವುದರೊಂದಿಗೆ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಸಿನಿಮಾವು ತೆರೆಗೆ ಬರಲು ಸನ್ನಿಹಿತವಾಗಿರುವುದರಿಂದ ಪ್ರಚಾರದ ಮೊದಲ ಹಂತವಾಗಿ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ರಿಯಲ್ದಲ್ಲಿ ಕ್ವೌರಿಕ. ರೀಲ್ದಲ್ಲಿ ಅದೇ ಪಾತ್ರ ನಿರ್ವಹಿಸಿರುವ ಡಾ.ಮುತ್ತುರಾಜ್.ಎಂ.ಎಸ್ ಮಾತನಾಡಿ ಮೂರು ದಶಕದ ಗೆಳೆಯ ಶ್ರೀಕಂಠ ಡೈರಕ್ಷನ್ ಮಾಡಲು ಆಸೆ ಪಟ್ಟದ್ದರು. ಅದರಂತೆ ನಾನು ಬಂಡವಾಳ ಹೂಡಿದ್ದೇನೆ ಎಂದರು.
ಕಥೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಶ್ರೀಕಂಠ.ಬಿ.ಎ ಹೇಳುವಂತೆ ಇಂದು ಆರು,ಮೂರು, ಎರಡು, ಒಂದು ತಿಂಗಳು. ಕೊನೆಗೆ ಮೂರೇ ದಿವಸಕ್ಕೆ ದುಡ್ಡು ಇಲ್ಲವೆ ಕೊಲೆಯಲ್ಲಿ ಅಂತ್ಯ ಕಾಣುತ್ತದೆ. ಬಟ್ಟೆ ಇಸ್ತ್ರೀ ಮಾಡುವ ರೋಲ್ಗೆ ಬಣ್ಣ ಹಚ್ಚಿದ್ದೇನೆ. ನಾವುಗಳು ಬಡತನದಿಂದ ಬಂದಿದ್ದರೂ, ನಮ್ಮ ಮಕ್ಕಳು ಹಾಗಾಗಬಾರದು. ಅವರನ್ನು ಶ್ರೀಮಂತರನ್ನಾಗಿ ಮಾಡಲು ಹೋದಾಗ ಹೇಗೆ ಪಂಗನಾಮವಾಯಿತು ಅನ್ನುವುದನ್ನು ಹಾಸ್ಯದೊಂದಿಗೆ ಜತೆಗೆ ಒಂದಷ್ಟು ಉತ್ತಮ ಸಂದೇಶಗಳನ್ನು ಸಮಾಜಕ್ಕೆ ಹೇಳುವ ಪ್ರಯತ್ನ ಮಾಡಲಾಗಿದೆ. ಯುವ ಪ್ರತಿಭೆ ಶ್ರೀಕಾಂತ್ಕುಮಾರ್ ತುಮಕೂರು ಸಿನಿಮಾಕ್ಕೆ ಸಾಹಿತ್ಯ, ಸಹ ನಿರ್ದೇಶನ ಅಲ್ಲದೆ ಎಲ್ಲಾ ಜವಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಅವರಿಗೆ ಉಜ್ವಲ ಭವಿಷ್ಯವಿದೆ. ಇಂತಹವರ ಅವಶ್ಯಕತೆ ಚಿತ್ರರಂಗಕ್ಕೆ ಬೇಕಾಗಿದೆ. ಮಾಧ್ಯಮದವರು ಇದನ್ನು ಒಪ್ಪಿಸಿಕೊಂಡು, ಚಿತ್ರವು ಯಶಸ್ವಿಯಾಗಲು ತಮ್ಮಗಳ ಪ್ರೋತ್ಸಾಹಬೇಕೆಂದು ಕೋರಿಕೊಂಡರು.
ಧೀರಜ್, ಉದಯ್ ನಾಯಕರು. ಡಯಾನ, ಚೈತ್ರಾ ನಾಯಕಿಯರು. ಇವರೊಂದಿಗೆ ಭದ್ರಾವತಿ ಶ್ರೀನಿವಾಸ್ ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಕುಮಾರ್ಈಶ್ವರ್, ಛಾಯಾಗ್ರಹಣ ಗುರುರಾಜ್, ಸಂಕಲನ ದೊಡ್ಡಮನೆ ಗಣೇಶ್ ಅವರದಾಗಿದೆ. ಹಾಸನ, ಚಿಕ್ಕಮಗಳೂರು, ಮಡಕೇರಿ, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸುಚಿತ್ ಫಿಲಂಸ್ನ ವೆಂಕಟ್ಗೌಡ ಸಾರಥ್ಯದಲ್ಲಿ ಸಿನಿಮಾವು ಮೇ ಮೊದಲ ವಾರದಲ್ಲಿ ರಾಜ್ಯಾದ್ಯಂತ ಅದರಲ್ಲೂ ಬಿ ಸೆಂಟರ್ನ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.