ಬೆಂಗಳೂರು: ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಗ್ಯಾರೇಜ್ ಮಾಡುತ್ತಿದ್ದ ಖಾಸಗಿ ವ್ಯಕ್ತಿ, ಪ್ರಶ್ನೆ ಕೇಳಿದವರಿಗೆ ಹಲ್ಲೆ ಮಾಡಿದ್ದಾನೆ. ಸೈಫುಲ್ಲಾ ಎಂಬಾತ ಬಿಬಿಎಂಪಿ ಪ್ಲಾಂಟ್ ಮುಂಭಾಗದಲ್ಲಿ ತನ್ನ ಗ್ಯಾರೇಜ್ ಮಟೀರಿಯಲ್ ಇಡುತ್ತಿದ್ದ. ನವೀನ್ ಎಂಬ ವ್ಯಕ್ತಿ ಇದನ್ನು ಪ್ರಶ್ನಿಸಿದಾಗ ಗಲಾಟೆ ಶುರುವಾಯಿತು.
ನಂತರ, ಐದಾರು ಯುವಕರನ್ನು ಕರೆದುಕೊಂಡು ಬಂದ ಸೈಫುಲ್ಲಾ… ಲಾಂಗು, ಮಚ್ಚು ಹಿಡಿದು ನವೀನ್ ಹಾಗೂ ಪ್ರಭು ಎಂಬ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಭು, ಗಲಾಟೆಯಲ್ಲಿ ಭಾಗಿಯಾಗದಿದ್ದರೂ, ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದು, ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಜೀವದ ಹೋರಾಟ ನಡೆಸುತ್ತಿದ್ದಾನೆ. ಗಾಯಾಳುವಿನ ಅಕ್ಕ ದೂರು ನೀಡಲು ಹೋಗಿದರೂ, ಪೊಲೀಸರು ದಾಖಲಿಸದೆ,
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಗದರಿಸಿ ಹಿಂದಕ್ಕೆ ಕಳಿಸಿದ ಬಗ್ಗೆ ಆರೋಪ ಕೇಳಿಬರುತ್ತಿದೆ. ಆಸ್ಪತ್ರೆಯಿಂದ ಕರೆ ಬಂದ ನಂತರ ಮಾತ್ರ ಪೊಲೀಸರು ದೂರು ಪಡೆದುಕೊಂಡಿದ್ದಾರೆ. ಇದುವರೆಗೆ ಆರೋಪಿಗಳ ಬಂಧನವಾಗಿಲ್ಲ ಎಂಬುದು ಕುಟುಂಬದ ಬೇಸರ. ಸರ್ಕಾರಿ ಜಾಗದಲ್ಲಿ ಖಾಸಗಿ ದರ್ಬಾರ್, ಸಾರ್ವಜನಿಕರ ಮೇಲೆ ಹಲ್ಲೆ ಮತ್ತು ನಂತರದ ಪೊಲೀಸ್ ನಿರ್ಲಕ್ಷ್ಯ, ಈ ಎಲ್ಲದೂ ಜನರ ನಂಬಿಕೆಗೆ ಪೆಟ್ಟಾಗಿಸುವಂಥದ್ದಾಗಿದೆ