ಕಲಬುರಗಿ:- ಕಾಶ್ಮೀರದಲ್ಲಿ ಅಮಾಯಕರ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ ವಿಶ್ವದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ದೇಶದೆಲ್ಲೆಡೆ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿ ಬಂದಿದ್ದು, ಪ್ರತಿಭಟನೆ ಮೂಲಕ ಉಗ್ರರ ದಾಳಿ ಖಂಡಿಸಿದ್ದಾರೆ.
ಕಸ ಬಿಸಾಡಬೇಡಿ ಎಂದಿದ್ದಕ್ಕೆ ನಡು ರಸ್ತೆಯಲ್ಲೇ ಕಾಲೇಜು ಪ್ರಾಧ್ಯಾಪಕನ ಮೇಲೆ ಹಿಗ್ಗಾಮುಗ್ಗಾ ಥಳಿತ!
ಅದರಂತೆ ಪಾಕ್ ವಿರುದ್ಧ ಯುದ್ಧ ಸಾರುವಂತೆ ಹಿಂದೂಪರ ಸಂಘಟನೆ ಆಗ್ರಹಿಸಿದ್ದು, ಈಡುಗಾಯಿ ಒಡೆಯುವ ಮೂಲಕ ಕೇಂದ್ರಕ್ಕೆ ಆಗ್ರಹಿಲಿದ್ದಾರೆ. ಯುದ್ಧ ಮಾಡಲೇಬೇಕಾದ ಸ್ಥಿತಿ ಈಗ ಬಂದಿದೆ. ಹೀಗಾಗಿ ಯುದ್ಧ ಮಾಡುವಂತೆ ಶ್ರೀ ಶರಣಬಸವೇಶ್ವರ ಗುಡಿಮುಂದೆ ಈಡುಗಾಯಿ ಒಡೆದು ಆಗ್ರಹಿಸಿದ್ದಾರೆ. ಪಾಕ್ ಬೆಂಬಲಿತ ಉಗ್ರರಿಗೆ ಪಾಠ ಕಲಿಸಲು ಯುದ್ಧ ಘೋಷಿಸಿ. ಮೋದಿ ಸರ್ಕಾರ ಕೂಡಲೇ ಯುದ್ಧ ಘೋಷಣೆ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.