Close Menu
Ain Live News
    Facebook X (Twitter) Instagram YouTube
    Wednesday, June 4
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ

    By Author AINMay 25, 2024
    Share
    Facebook Twitter LinkedIn Pinterest Email
    Demo

    ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್  ಏಪ್ರಿಲ್​ 14ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಸಾವಿನ ಬಗ್ಗೆ ಪತ್ನಿ ರೇಖಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

    ‘ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್​ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ. ಈ ಮನೆಯನ್ನು ನಾನು ಮತ್ತು ಅವರು ಸೇರಿ ಕಟ್ಟಿದ್ದು. ಇಂದು ಅವರು ಇಲ್ಲ ಎಂದಾಗ ಈ ಮನೆಯಲ್ಲಿ ನಮಗೆ ಇರೋಕೆ ಆಗುತ್ತಿಲ್ಲ. ಈಗ ಶ್ರೀರಂಗಪಟ್ಟಣದಲ್ಲಿ ಪೂಜೆ ಮಾಡಿ ಅವರ ಬಟ್ಟೆಗಳನ್ನು ಅಲ್ಲಿ ಬಿಡಬೇಕು ಅಂತ ಅರ್ಚಕರು ಹೇಳಿದ್ದಾರೆ. ಹಾಗಾಗಿ ಹಳೇ ಬಟ್ಟೆಗಳನ್ನು ತೆಗೆಯುವಾಗ ಡೆಟ್​ ನೋಟ್​ ಸಿಕ್ಕಿತು’ ಎಂದು ರೇಖಾ ಜಗದೀಶ್​ ಹೇಳಿದ್ದಾರೆ.

    ‘ಜಗದೀಶ್​ ಬರೆದ ಡೆತ್​ ನೋಟ್​ ನೋಡಿ ತುಂಬ ನೋವಾಯಿತು ಮತ್ತು ಶಾಕ್​ ಆಯ್ತು. ಬಿಸ್ನೆಸ್​ ಪಾರ್ಟ್ನರ್​ಗಳ ಬಗ್ಗೆ ಅವರು ಬರೆದಿದ್ದಾರೆ. ಅನ್ಯಾಯ ಆಗಿದೆ ಅಂತ ಬರೆದಿದ್ದಾರೆ. ತಮಗೆ ತುಂಬ ಕಾಟ, ಕಿರುಕುಳು ಕೊಡುತ್ತಾರೆ ಅಂತ ಈ ಮೊದಲು ಒಮ್ಮೆ ನನ್ನ ಬಳಿ ಹೇಳಿದ್ದರು. ಆದರೆ ಈ ಮಟ್ಟಕ್ಕೆ ಆಗುತ್ತೆ ಅಂತ ನಮಗೆ ಗೊತ್ತಿರಲಿಲ್ಲ. ಏನೇ ಇದ್ದರೂ ನಮ್ಮ ಜೊತೆ ಹಂಚಿಕೊಳ್ಳಿ ಅಂತ ಧೈರ್ಯ ತುಂಬಿದ್ದೆವು. ಪಾರ್ಟ್ನರ್​ ಸುರೇಶ್​ ಅವರಿಂದ ತುಂಬ ಕಿರುಕುಳ ಆಗಿದೆ’ ಎಂದು ರೇಖಾ ಜಗದೀಶ್​ ಆರೋಪಿಸಿದ್ದಾರೆ.

    ‘ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ. ಅಷ್ಟು ಗಟ್ಟಿಯಾಗಿ ಹುಲಿ ರೀತಿ ಇದ್ದ ಅವರನ್ನು ಕೊನೆಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವನು ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾನೋ ಗೊತ್ತಿಲ್ಲ. ನನಗೆ ಆ ಭಯ ಇದೆ. ಅವರು ಬರೆದಿದ್ದನ್ನೆಲ್ಲ ನಾನು ವೀಕ್ಷಿಸಿದ ಮೇಲೆ ಪಾರ್ಟ್ನರ್​ಗಳಿಂದ ನನ್ನ ಗಂಡನಿಗೆ ತುಂಬಾ ಕಿರುಕುಳ ಆಗಿದೆ. ಫೋರ್ಚರಿ ಕೂಡ ಮಾಡಿದ್ದಾರೆ’ ಎಂದು ರೇಖಾ ಜಗದೀಶ್​ ಅಳಲು ತೋಡಿಕೊಂಡಿದ್ದಾರೆ.

    ‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಚೆಕ್​ಗಳಿಗೆ ಸೈನ್​ ಹಾಕಿಸಿಕೊಂಡಿದ್ದಾರೆ. ಹೀಗೆಲ್ಲ ಬ್ಲ್ಯಾಕ್​ ಮೇಲ್​ ಮಾಡಿದ್ದಕ್ಕೆ ನಮ್ಮ ಯಜಮಾನರು ಹೋಗಿದ್ದಾರೆ. ನಾವು ನಾಲ್ಕು ಜನ ಒಂದೇ ಗೂಡಿನ ಹಕ್ಕಿಗಳ ರೀತಿ ಇದ್ದೆವು. ನಮ್ಮನ್ನು ಬಿಟ್ಟು ಅವರು ಹೋಗುತ್ತಿರಲಿಲ್ಲ. ಸುರೇಶ್​ ಇದೆಲ್ಲವನ್ನೂ ಮಾಡಿದ್ದಾರೆ. ಅಕೌಂಟ್​ ಪಾಸ್​ವರ್ಡ್​ ಕೂಡ ಅವರೇ ಇಟ್ಟುಕೊಂಡು ಹೀಗೆಲ್ಲ ಮಾಡಿದರು. ನಮ್ಮ ಮನೆಯನ್ನು ಈ ಸ್ಥಿತಿಗೆ ತಂದು ಬಿಟ್ಟಿದ್ದಾರೆ. ಲಾಸ್ಟ್​ ಕಾಲ್​, ಮೆಸೇಜ್​ ಅವರದ್ದೇ ಇದೆ. ಫೋರ್ಜರಿ ಮಾಡಿದ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಿದ್ದೇನೆ. ತನಿಖೆ ಬಳಿಕ ಎಲ್ಲವೂ ನಿಮಗೆ ಗೊತ್ತಾಗುತ್ತದೆ’ ಎಂದು ರೇಖಾ ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಹೈಕೋರ್ಟ್‌ ಚಾಟಿಗೆ ಬಗ್ಗದ ದುರಂಕಾರಿ ಕಮಲ್‌ ಹಾಸನ್..ಮತ್ತೆ ಧಿಮಾಕಿನ ಮಾತನಾಡಿದ ತಮಿಳು ನಟ!

    June 4, 2025

    RCB ಕನಸು ನನಸು..ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ KGF ಪ್ರಶಾಂತ್‌ ನೀಲ್‌ Video ವೈರಲ್!‌

    June 4, 2025

    ಪ್ರಭಾಸ್ ನಟನೆಯ ʼದಿ ರಾಜಾ ಸಾಬ್ʼ ಬಿಡುಗಡೆ ದಿನಾಂಕ ನಿಗದಿ!

    June 3, 2025

    ದುರಂಕಾರಿ ಕಮಲ್‌ ಹಾಸನ್‌ಗೆ ಬಿಗ್‌ ಶಾಕ್‌ ಕೊಟ್ಟ ಹೈಕೋರ್ಟ್!‌

    June 3, 2025

    ಕ್ಷಮೆ ಕೇಳಲಿಲ್ಲ.. ಮತ್ತೆ ಮೊಂಡು ವಾದ, ಪತ್ರ ಬರೆದು ಕನ್ನಡ ವಿರೋಧಿ ಕಮಲ್‌ ಹಾಸನ್‌ ಹೇಳಿದ್ದೇನು?

    June 3, 2025

    RCB ಜೆರ್ಸಿ ತೊಟ್ಟು ಈ ಸಲಾ ಕಪ್‌ ನಮ್ದೇ ಎಂದ ರಮೇಶ್ ಅರವಿಂದ್!

    June 3, 2025

    ಮೊದಲು ಕ್ಷಮೆ ಕೇಳಿ, ಕನ್ನಡ ವಿರೋಧಿ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ತರಾಟೆ!

    June 3, 2025

    ಸೀತಾರಾಮ ಸೀರಿಯಲ್‌ ಮುಕ್ತಾಯಗೊಳ್ಳುತ್ತಿದ್ದಂತೆ ಗುಡ್‌ ನ್ಯೂಸ್‌ ಕೊಟ್ಟ ನಟಿ ವೈಷ್ಣವಿ ಗೌಡ!

    June 2, 2025

    ʼಥಗ್‌ ಲೈಫ್‌ʼ ಬಿಡುಗಡೆಗೆ ಸಂಕಷ್ಟ: ಕಾನೂನು ಮೊರೆ ಹೋದ ಕಮಲ್ ಹಾಸನ್!

    June 2, 2025

    ಅಯ್ಯೋ ವಿಧಿಯೇ? ಸ್ಕ್ರೀಪ್ಟ್‌ ಹೇಳಿ ಬರುವಾಗ ಎದೆ ನೋವಿನಿಂದ ಖ್ಯಾತ ನಿರ್ದೇಶಕ ಸಾವು!

    June 2, 2025

    ವಿರಾಟ್ ಕೊಹ್ಲಿ-ಶ್ರೇಯರ್ ಅಯ್ಯರ್‌ನ್ನು ಶ್ಲಾಘಿಸಿದ ಬಾಹುಬಲಿ ನಿರ್ದೇಶಕ…ಯಾರಿಗೆ ʼಕಪ್ʼ ರಾಜಮೌಳಿ ಹೇಳಿದ್ದೇನು?

    June 2, 2025

    ಕನ್ನಡ ವಿರೋಧಿ ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ ʼಕನ್ನಡತಿʼ! Video ವೈರಲ್!

    June 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.