ಪಹಲ್ಗಾಮ್ ದಾಳಿಗೆ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಪಿ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದೆ. ಪಾಕ್ 9 ಭಯೋತ್ಪಾದನ ತಾಣಗಳನ್ನು ಆಪರೇಷನ್ ಸಿಂಧೂರ ಮೂಲಕ ಧ್ವಂಸ ಮಾಡಲಾಗಿದೆ. 25 ನಿಮಿಷದಲ್ಲಿ ನಡೆದ ಭರ್ಜರಿ ಕಾಯಾರ್ಚರಣೆಯಲ್ಲಿ 70ಕ್ಕೂ ಹೆಚ್ಚು ಪಾಪಿ ಉಗ್ರಕ್ರಿಮಿಗಳನ್ನು ಭಾರತ ಉಡೀಸ್ ಮಾಡಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 29ಕ್ಕೂ ಹೆಚ್ಚು ಪ್ರವಾಸಿಗರನ್ನು ಉಗ್ರರು ಕೊಂದು ಹಾಕಿದ್ದರು. ಧರ್ಮದ ಹೆಸರಲ್ಲಿ ನಡೆದಿದ್ದ ಈ ಅಧರ್ಮದ ಕೆಲಸಕ್ಕೆ ಭಾತರ ದಿಟ್ಟ ಉತ್ತರ ಕೊಟ್ಟಿದೆ. ಭಾರತೀಯ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ್ದ ಪಾಪಿಗಳನ್ನು ಆಪರೇಷನ್ ಸಿಂಧೂರ ಮೂಲಕ ನಿರ್ನಾಮ ಮಾಡಿದೆ. ಭಾರತ ಇತಿಹಾಸ ಪುಟ ಸೇರಿರುವ ಈ ಕಾರ್ಯಾಚರಣೆಯನ್ನು ತೆರೆಮೇಲೆ ತರಲು ನಿರ್ಮಾಪಕರು ತಾ ಮುಂದು ನಾ ಮುಂದೆ ಎನ್ನುತ್ತಿದ್ದಾರೆ.
ಆಪರೇಷನ್ ಸಿಂಧೂರ ರೋಚಕ ಜರ್ನಿಯನ್ನು ಸಿನಿಮಾ ಮಾಡೋದಿಕ್ಕೆ ಬಾಲಿವುಡ್ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ. ಆಪರೇಷನ್ ಸಿಂಧೂರ್ ಶೀರ್ಷಿಕೆಯನ್ನು ನೋಂದಾಯಿಸಲು ಹಲವರು ಸಜ್ಜಾಗಿದ್ದಾರಂತೆ. ಮಹಾವೀರ್ ಜೈನ್ ಫಿಲ್ಮ್ಸ್ ಈ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದು, ಈ ಶೀರ್ಷಿಕೆಯನ್ನು ನೋಂದಾಯಿಸಿದ ಮೊದಲ ಬ್ಯಾನರ್ ಆಗಿದೆ. ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಕೂಡ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದಾರಂತೆ.
ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆಗಳಾದ ಜೀ ಸ್ಟುಡಿಯೋಸ್ ಮತ್ತು ಟಿ-ಸೀರೀಸ್ ಈ ಶೀರ್ಷಿಕೆಯನ್ನು ನೋಂದಾಯಿಸಿದ ಮೂರನೇ ಮತ್ತು ನಾಲ್ಕನೇ ನಿರ್ಮಾಣ ಸಂಸ್ಥೆಗಳು. ಈ ಎಲ್ಲಾ ಬ್ಯಾನರ್ಗಳು ಈ ಇತ್ತೀಚಿನ ಕಾರ್ಯಾಚರಣೆ ಮತ್ತು ಪಹಲ್ಗಾಮ್ ದಾಳಿಯನ್ನು ಆಧರಿಸಿ ಈ ಶೀರ್ಷಿಕೆಯಡಿಯಲ್ಲಿ ಸಿನಿಮಾ ನಿರ್ಮಿಸಲು ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.
“ಆಪರೇಷನ್ ಸಿಂಧೂರ” ಪವರ್ ಫುಲ್ ಟೈಟಲ್ ಆಗಿದ್ದು, ಭಾರತೀಯ ಸಶಸ್ತ್ರ ಪಡೆಗಳ.ಶೌರ್ಯ, ಬಲವನ್ನು ತೋರಿಸುತ್ತದೆ. ಈ ಶೀರ್ಷಿಕೆಯ ಮೇಲಿನ ಕ್ರೇಜ್ ದುಪ್ಪಟ್ಟಿದೆ. ನಿಯಮಗಳ ಪ್ರಕಾರ, ಮೊದಲು ನೋಂದಾಯಿಸಿದ ನಿರ್ಮಾಪಕರಿಗೆ ಶೀರ್ಷಿಕೆ ಸಿಗುತ್ತದೆ. ಆದರೆ ಯಾವ ಬ್ಯಾನರ್ ಅಂತಿಮವಾಗಿ ಈ ಶೀರ್ಷಿಕೆಯೊಂದಿಗೆ ಚಿತ್ರವನ್ನು ಘೋಷಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.