ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಭಾರತದ ನಡೆಸಿರುವ ಆಪರೇಷನ್ ಸಿಂಧೂರ ಮಿಲಿಟಿಯರಿ ಕಾರ್ಯಾಚರಣೆಯನ್ನು ಇಡಿ ದೇಶವೇ ಕೊಂಡಾಡುತ್ತಿದೆ. ರಾಜಕೀಯ ನಾಯಕರು ಪಕ್ಷ ಭೇದ ಮರೆತು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾತಾರೆಯರು ನಮಗೆ ನ್ಯಾಯ ಸಿಕ್ಕಿದೆ ಎಂದು ಮುಕ್ತ ಕಂಠದಿಂದ ಕೊಂಡಾಡುತ್ತಿದ್ದಾರೆ. ಆದ್ರೆ ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪಾಕ್ ಕಲಾವಿದರು ಖಂಡಿಸಿದ್ದಾರೆ.
ಆಪರೇಷನ್ ಸಿಂಧೂರ ಏರ್ ಸ್ಟೈಕ್ ಬಗ್ಗೆ ಮಹಿರಾ ಖಾನ್, ಫವಾದ್ ಖಾನ್, ಹನಿಯಾ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ದಾಳಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿ ಭಾರತದ ನಡೆಯನ್ನು ಟೀಕಿಸಿದ್ದಾರೆ.
ಪಾಕ್ ನಟ ಫವಾದ್ ಖಾನ್, “ಈ ನಾಚಿಕೆಗೇಡಿನ ದಾಳಿಯಲ್ಲಿ ಗಾಯಗೊಂಡ ಹಾಗೂ ಸಾವನ್ನಪ್ಪಿದವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಮೃತರ ಆತ್ಮಗಳಿಗೆ ಶಾಂತಿ ಸಿಗಲಿ. ಮುಂದಿನ ದಿನಗಳಲ್ಲಿ ಅವರ ಪ್ರೀತಿಪಾತ್ರರಿಗೆ ಶಕ್ತಿ ತುಂಬಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದಯ ಪೋಸ್ಟ್ ಮಾಡಿದ್ದಾರೆ. ಪವಾದ್ ನಟನೆಯ ಅಬೀರ್ ಗುಲಾಲ್ ಚಿತ್ರವನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಈ ಚಿತ್ರದಲ್ಲಿ ಪವಾದ್ ಬಿಟ್ಟು ಮಿಕ್ಕ ಎಲ್ಲವರೂ ಭಾರತೀಯರು ಕೆಲಸ ಮಾಡಿದ್ದರು.
“ಇಂದು ಭಾರತ ಮಾಡಿದ್ದು ಅವಮಾನಕರ ಮತ್ತು ಹೇಡಿತನದ ಕೃತ್ಯ. ಮುಗ್ಧ ನಾಗರಿಕರ ಮೇಲೆ ದಾಳಿ ಮಾಡುವುದು, ಮುಗ್ಧ ಜೀವಗಳನ್ನು ಬಲಿ ತೆಗೆದುಕೊಳ್ಳುವುದು – ಇದು ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ಇದನ್ನು ಸಮರ್ಥಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಂದು ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಪ್ರತಿಯೊಂದು ಪಾಕಿಸ್ತಾನಿ ಕುಟುಂಬಕ್ಕೂ ನನ್ನ ಹೃದಯ ನೋವುಂಟುಮಾಡಿದೆ” ಎಂದು ಬಿಲಾಲ್ ಅಬ್ಬಾಸ್ ಖಾನ್ ಪೋಸ್ಟ್ ಹಾಕಿದ್ದಾರೆ.
ಪಹಲ್ಗಾಮ್ ಘಟನೆ ಬಳಿಕ ಭಾರತದಲ್ಲಿ ಪಾಕ್ ಸಂಬಂಧಪಟ್ಟ ಕಲಾವಿದರು, ಸೋಷಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡಿದೆ.