ಮೈಸೂರು : ಆಸ್ತಿ ವಿವಾದ ವಿಚಾರವಾಗಿ ಒಂದೇ ಕುಟುಂಬದವರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ನಂಜನಗೂಡು ಮಿನಿ ವಿಧಾನಸೌಧದಲ್ಲಿ ಆವರಣದಲ್ಲಿ ನಡೆದಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದ ಕುಟುಂಬವೊಂದು ಕುಟುಂಬದ ಆಸ್ತಿ ನೋಂದಣಿ ಮಾಡಿಕೊಳ್ಳಲು ಉಪನೋಂದಣಾಧಿಕಾರಿ ಕಛೇರಿಗೆ ಬಂದಿದ್ದರು.
ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ನಿರಾಕರಿಸಿದ ಪರೀಕ್ಷ ಕೇಂದ್ರ ಸಿಬ್ಬಂದಿ
ಹೆಣ್ಣು ಮಗಳ ಆಸ್ತಿಗೆ ತಾಯಿ ಮೊದಲು ಸಹಿ ಹಾಕಿ ಬಂದಿದ್ದಾರೆ. ಹೆಣ್ಣು ಮಗಳಿಗೆ ಆಸ್ತಿ ನೀಡುವುದನ್ನು ಸಹಿಸದ ಗಂಡು ಮಕ್ಕಳಿಂದ ಗಲಾಟೆ ನಡೆದಿದ್ದು, ಇದೇ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.