ಬಳ್ಳಾರಿ: ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ನಡೆಯುತ್ತಿದೆ ಎನ್ನುವ ದೂರು ಹಿನ್ನೆಲೆಯಲ್ಲಿ ಎಸ್ಪಿ ಡಾ.ವಿಜೆ ಶೋಭರಾಣಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಲೋನ್ ವಿಚಾರಕ್ಕೆ ಕಿರಿಕ್: EMI ಕಟ್ಟಲು ಹೇಳಿದ ಬ್ಯಾಂಕ್ ಸಿಬ್ಬಂದಿಗೆ ಕಲ್ಲೇಟು!
ಹಲವು ದಿನಗಳಿಂದ ಇಲ್ಲಿನ ಸ್ಪಾನಲ್ಲಿ ವೇಶ್ಯವಾಟಿಕೆ ದಂಧೆ ನಡೆಯುತ್ತಿದೆ ಎನ್ನುವ ದೂರುಗಳಿದ್ದವು. ಖಚಿತ ಮಾಹಿತಿ ಮೇರೆಗೆ ಸಿಇಎನ್ ವಿಭಾಗದ ಪೊಲೀಸರ ಸಹಿತ ದಾಳಿ ಮಾಡಿದ ಎಸ್ಪಿ ಅವರು ವೇಶ್ಯವಾಟಿಕೆಯಲ್ಲಿ ತೊಡಗಿದ್ದ ಬಳ್ಳಾರಿ ಮೂಲದ ಇಬ್ಬರು, ಗಂಗಾವತಿಯ ಒಬ್ಬ ಸೇರಿ ಮೂವರನ್ನು ಬಂಧಿಸಿದ್ದು, ಸ್ಪಾ ನಡೆಸುತ್ತಿದ್ದ ಬಿ.ಎಂಡಿ ಮತೀಲ್, ಮೈನಜ್ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.