ವಿಜಯಪುರ : ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಹಿನ್ನಲೆಯಲ್ಲಿ ಯತ್ನಾಳ ವಿರುದ್ದ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಅಲ್ಪಸಂಖ್ಯಾತ ಮುಖಂಡರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಶಾಸಕ ಯತ್ನಾಳ್, ಬಾಳಾಠಾಕ್ರೆ ಮನೆಯಲ್ಲಿ ಪೈಗಂಬರ್ ಹುಟ್ಟಿದ್ದಾರೆ ಎಂದಿದ್ದರು. ಬಳಿಕ ಈ ವಿಚಾರವಾಗಿ ಶಾಸಕ ಯತ್ನಾಳ ಸ್ಪಷ್ಟನೆ ಕೂಡ ನೀಡಿದ್ದರು. ಇದರ ಮಧ್ಯೆ ಶಾಸಕ ಯತ್ನಾಳ ವಿರುದ್ದ ಹೋರಾಟ ಆರಂಭವಾದವು. ಇನ್ನೂ ಶಾಸಕ ಯತ್ನಾಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಅಲ್ಪಸಂಖ್ಯಾತ ಮುಖಂಡರು ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಹೋರಾಟ ನಡೆಸಿದರು.
ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿ ಶಾಸಕ ಯತ್ನಾಳ ವಿರುದ್ದ ವಾಗ್ದಾಳಿ ನಡೆಸಿದರು. ಕೆಲ ದಿನಗಳ ಹಿಂದೆ ಅಣ್ಣ ಬಸವಣ್ಣನವರ ಕುರಿತು ಅಪಮಾನಕರ ರೀತಿ ಮಾತನಾಡಿದ್ದ ಹುಚ್ಚು ಮನಸ್ಥಿತಿಯ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೀಗ ಇಸ್ಲಾಂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಪ್ರವಾದಿ ಮಹಮ್ಮದ್ ಪೈಗಂಭರ ಕುರಿತು ಅವಮಾನಕರ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.